ಭಾರತದ ಬ್ಯಾಡ್ಮಿಂಟನ್ ದಂತಕತೆ ನಂದು ನಾಟೇಕರ್ ನಿಧನ

Update: 2021-07-28 08:39 GMT
photo: twitter

ಮುಂಬೈ: ಭಾರತದ ಬ್ಯಾಡ್ಮಿಂಟನ್ ದಂತಕತೆ ನಂದು ನಾಟೇಕರ್ ಅವರು ಪುಣೆಯಲ್ಲಿ ಮಂಗಳವಾರ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಭಾರತದ ಆರಂಭಿಕ ಬ್ಯಾಡ್ಮಿಂಟನ್ ತಾರೆಗಳಲ್ಲಿ ಒಬ್ಬರಾದ ಅವರು ಕ್ರೀಡಾ ಉತ್ಕೃಷ್ಟತೆಗಾಗಿ ಅರ್ಜುನ ಪ್ರಶಸ್ತಿ ಪಡೆದ ಮೊದಲ ಕ್ರೀಡಾಪಟು.

ಅಂತರ್ ರಾಷ್ಟ್ರೀಯ ಪದಕ ಗಳಿಸಿದ ಹಾಗೂ  ಆಲ್ ಇಂಗ್ಲೆಂಡ್‌ನ ಕ್ವಾರ್ಟರ್ ಫೈನಲ್‌ಗೆ ಕಾಲಿಟ್ಟ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರನಾಗಿದ್ದ ಅವರು ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡ ಗೆದ್ದುಕೊಂಡಿದ್ದರು.

ನಾಟೇಕರ್ ಸಾಂಗ್ಲಿಯಲ್ಲಿ ಜನಿಸಿದರು. 1953 ರಲ್ಲಿ ತಮ್ಮ 20 ನೇ ವಯಸ್ಸಿನಲ್ಲಿ ಭಾರತವನ್ನು ಪ್ರತಿನಿಧಿಸಿದರು ಹಾಗೂ ವಿಶಿಷ್ಟ ವೃತ್ತಿಜೀವನವನ್ನು ಹೊಂದಿದ್ದ ಅವರು ವೈಯಕ್ತಿಕವಾಗಿ ಹಾಗೂ  ತಂಡದ ಭಾಗವಾಗಿ ಹಲವು ಬಾರಿ ಎತ್ತರಕ್ಕೆ ಏರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News