ಈಗಿನ ಸನ್ನಿವೇಶ ತುರ್ತು ಪರಿಸ್ಥಿತಿ ಸಂದರ್ಭಕ್ಕಿಂತಲೂ ಗಂಭೀರವಾಗಿದೆ: ಮಮತಾ ಬ್ಯಾನರ್ಜಿ

Update: 2021-07-28 13:36 GMT

ಹೊಸದಿಲ್ಲಿ: ಪೆಗಾಸಸ್ ಗೂಢಚರ್ಯೆಗೆ ಸಂಬಂಧಿಸಿದಂತೆ ಮತ್ತೆ ಕೇಂದ್ರ ಸರಕಾರದ ಮೇಲೆ ಹರಿಹಾಯ್ದಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಿನ ಸನ್ನಿವೇಶವು ತುರ್ತು ಪರಿಸ್ಥಿತಿಯ ಸಂದರ್ಭಕ್ಕಿಂತಲೂ ಗಂಭೀರವಾಗಿದೆ ಎಂದು ಆರೋಪಿಸಿದ್ದಾರೆ.

ಬುಧವಾರ ದಿಲ್ಲಿಯಲ್ಲಿ ಮಾತನಾಡಿದ ಮಮತಾ ಅವರು ಬದುಕು, ಸಂಪತ್ತು ಹಾಗೂ ಸುರಕ್ಷತೆಯನ್ನು ಒಳಗೊಂಡಿರುವ ಈ ವಿಚಾರವು(ಪೆಗಾಸಸ್)ಗಂಭೀರವಾದುದಾಗಿದೆ. ನನ್ನ ಫೋನ್ ಹ್ಯಾಕ್ ಆಗಿದೆ. ಅಭಿಷೇಕ್ ನ ಫೋನ್ ಅನ್ನು ಕೂಡ ಈಗಾಗಲೇ ಹ್ಯಾಕ್ ಮಾಡಲಾಗಿದೆ. ಪ್ರಶಾಂತ್ ಕಿಶೋರ್ ಅವರ ಫೋನ್ ಕೂಡ ಹ್ಯಾಕ್ ಆಗಿದೆ. ಒಂದು ಫೋನ್ ಅನ್ನು ಹ್ಯಾಕ್ ಮಾಡಿದರೆ ಸಾಕು ಆ ಮೂಲಕ ಹಲವು ಫೋನ್ ಗಳನ್ನು ಹ್ಯಾಕ್ ಮಾಡಬಹುದಾಗಿದೆ ಎಂದು ಮಮತಾ ಹೇಳಿದರು.

ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಹಗರಣದ ಸಂಬಂಧ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು. ನಮಗೆ ಸುಪ್ರೀಂಕೋರ್ಟ್ ಮೇಲೆ ನಂಬಿಕೆ ಇದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News