ಪುದು ಕಾಂಗ್ರೆಸ್ ನಿಂದ ಅಮೀರ್ ತುಂಬೆಗೆ ಸಂತಾಪ ಸಭೆ
ಬಂಟ್ವಾಳ, ಜು.28: ಪುದು ವಲಯ ಕಾಂಗ್ರೆಸ್ ಸಮಿತಿ ಮತ್ತು ಪುದು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಇತ್ತೀಚೆಗೆ ನಿಧನರಾದ ರಾಜ್ಯ ಇಂಟಕ್ ಉಪಾಧ್ಯಕ್ಷ ಡಾ. ಅಮೀರ್ ತುಂಬೆ ಅವರಿಗೆ ಸಂತಾಪ ಸೂಚಕ ಸಭೆ ಫರಂಗಿಪೇಟೆಯ ವಿಶ್ವಾಸ್ ಸಿಟಿ ಸೆಂಟರ್ ಕಂಪ್ಲೇಟ್ ನಲ್ಲಿ ಬುಧವಾರ ಸಂಜೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಕೆಪಿಸಿಸಿ ಸಂಯೋಜಕ ಉಮರ್ ಫಾರೂಕ್ ಪರಂಗಿಪೇಟೆ, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲಿಡಿಯೋ ಪಿಂಟೋ, ಸದಸ್ಯರಾದ ಭಾಸ್ಕರ ರೈ, ಕಿಶೋರ್, ಹಿರಿಯ ಕಾಂಗ್ರೆಸಿಗರಾದ ಹುಸೇನ್ ಪಾಡಿ, ಎಫ್.ಎ.ಖಾದರ್, ಅಮ್ಮೆಮಾರ್ ಜುಮಾ ಮಸೀದಿಯ ಅಧ್ಯಕ್ಷ ಉಮರಬ್ಬ ಮಾತನಾಡಿದರು.
ಪುದು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಫೀಕ್ ಪೆರಿಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮುಡಿಪು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ತಿಯಾಝ್ ತುಂಬೆ, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ನರಿಂಗಣ, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೇರಿಮಾರ್, ಪುದು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ನಿಝಾಂ ಕುಂಜತ್ಕಲ, ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯದರ್ಶಿ ಹಕೀಮ್ ಮಾರಿಪಳ್ಳ, ಪಂಚಾಯತ್ ಮಾಜಿ ಅಧ್ಯಕ್ಷೆ ಆತಿಕ ಅಮ್ಮೆಮಾರ್, ಪಂಚಾಯತ್ ಮಾಜಿ ಸದಸ್ಯರಾದ ಎಸ್.ಹಸನಬ್ಬ, ಎಂ.ಕೆ.ಖಾದರ್, ಯುವ ಮುಖಂಡ ಹಿಶಾಮ್ ಫರಂಗಿಪೇಟೆ, ಪಂಚಾಯತ್ ಸದಸ್ಯರಾದ ಇಕ್ಬಾಲ್ ಸುಜೀರ್, ಲವೀನಾ, ಜಹೀರ್, ರಿಯಾಝ್, ಫೈಝಲ್ ಅಮ್ಮೆಮಾರ್, ಮುಹಮ್ಮದ್ ಮೋನು, ರಝಕ್ ಅಮ್ಮೆಮಾರ್, ರಶೀದಾ ಬಾನು, ಝೀನತ್, ರಝಿಯಾ, ಮುಖಂಡರಾದ ಗಫೂರ್ ಫರಂಗಿಪೇಟೆ, ಸಲೀಂ ಫರಂಗಿಪೇಟೆ, ಬಾಪಿ ಫರಂಗಿಪೇಟೆ, ಇನ್ಸದ್ ಮಾರಿಪಳ್ಳ, ಬಶೀರ್ ತಂಡೆಲ್, ಸದಾಶಿವ ಕುಮ್ದೇಲ್, ಸಲಾಂ ಮಲ್ಲಿ, ಸಮೀಝ್ ಫರಂಗಿಪೇಟೆ ಹಾಗೂ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.