ಗಣಿತಜ್ಞ ಪ್ರೊ.ನಾರಾಯಣ ಆಚಾರ್ಯರಿಗೆ ಗೌರವ
ಉಡುಪಿ, ಜು.28: ಆಧುನಿಕ ಕಾಲ ಘಟ್ಟದಲ್ಲಿ ಹಿರಿಯರೊಂದಿಗೆ ಕಿರಿಯರಿಗೆ ಸಮಯ ಕಳೆಯುವುದು ಸಾಧ್ಯವಾಗುತ್ತಿಲ್ಲ. ಹಿರಿಯರೆಡೆಗೆ ನಮ್ಮ ನಡಿಗೆ ಯಂತಹ ವಿಶಿಷ್ಟ ಕಾರ್ಯಕ್ರಮದ ಮೂಲಕ ಹಿರಿಯರ ಸಂತೋಷವನ್ನು ಹೆಚ್ಚಿಸುವ ಪುಣ್ಯದ ಕೆಲಸ ಇದು ಎಂದು ಅಂಬಲಪಾಡಿ ಶ್ರೀಮಹಾಕಾಳಿ ಜನಾರ್ದನ ದೇವಾಲಯದ ಆಡಳಿತ ಮೊಕ್ತೇಸರ ಡಾ.ನಿ.ಬಿ.ವಿಜಯ ಬಲ್ಲಾಳ್ ಹೇಳಿದ್ದಾರೆ.
ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಪತ್ರಕರ್ತರ ವೇದಿಕೆಯ ಸಹಯೋಗದ ವತಿಯಿಂದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯ ಕ್ರಮದಲ್ಲಿ ಗಣಿತಜ್ಞ ಮತ್ತು ವಿಶ್ರಾಂತ ಪ್ರಾಂಶುಪಾಲ ಪ್ರೊ.ಅಂಬಲಪಾಡಿ ನಾರಾಯಣ ಆಚಾರ್ಯ ಅವರನ್ನು ಅವರ ನಿವಾಸ ದಲ್ಲಿ ಸನ್ಮಾನಿಸಿ ಅವರು ಮಾತನಾಡುತಿದ್ದರು.
ಸಂಘಟಕ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಗೌರವ ಸಲಹೆಗಾರ ವಿಶ್ವನಾಥ ಶೆಣೈ, ಶಾಂತಾ ನಾರಾಯಣ ಆಚಾರ್, ಸುಹಾಸಂ ಅಧ್ಯಕ್ಷ ಎಚ್.ಶಾಂತಾರಾಜ ಐತಾಳ್, ಉಡುಪಿ ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ, ತ್ರಿಭಾಷಾ ಸಾಹಿತಿ ಮೌರೀಸ್ ತಾವ್ರೋ, ಕೊಡಂಕೂರು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಘುನಾಥ ಮಾಬೆನ್, ಕಲಾವಿದ ಪಿ.ಎನ್.ಆಚಾರ್ಯ, ಸಮತಿಯ ಸದಸ್ಯ ಸಂತೋಷ ಜೈನ್ ಎಣ್ಣೆಹೊಳೆ, ಸಮಿತಿಯ ಮಕ್ಕಳ ವಿಭಾಗದ ಸುನಿಧಿ ಎಸ್. ಅಜೆಕಾರು, ಸುನಿಜ ಎಸ್.ಅಜೆಕಾರು, ಶ್ರೀಧರ ನಾಯಕ್, ನರಸಿಂಹಮೂರ್ತಿ ರಾವ್ ಮೊದಲಾದವರು ಉಪಸ್ಥಿತರಿದ್ದರು.