×
Ad

ಮಧ್ಯಪ್ರದೇಶದಲ್ಲಿ ಗರಿಷ್ಠ ಕೋವಿಡ್ ಪ್ರತಿಕಾಯ: ಕನಿಷ್ಠ ಎಲ್ಲಿ ಗೊತ್ತೇ?

Update: 2021-07-29 09:53 IST

ಹೊಸದಿಲ್ಲಿ: ದೇಶದ ಮೂರನೇ ಎರಡರಷ್ಟು ಮಂದಿಯಲ್ಲಿ ಕೊರೋನ ವೈರಸ್ ಪ್ರತಿಕಾಯ ಅಭಿವೃದ್ಧಿ ಹೊಂದಿರುವುದು 11 ರಾಜ್ಯಗಳಲ್ಲಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ.

ಜೂನ್ 16ರಿಂದ ಜುಲೈ 6ರ ನಡುವೆ ನಡೆಸಿದ ಸಮೀಕ್ಷೆಯ ಪ್ರಕಾರ ಮಧ್ಯಪ್ರದೇಶದಲ್ಲಿ ದೇಶದಲ್ಲೇ ಅತ್ಯಧಿಕ ಅಂದರೆ ಶೇಕಡ 79ರಷ್ಟು ಮಂದಿಯಲ್ಲಿ ಪ್ರತಿಕಾಯ ಅಭಿವೃದ್ಧಿ ಹೊಂದಿರುವುದು ಪತ್ತೆಯಾಗಿದೆ. ಕೇರಳದಲ್ಲಿ ಕನಿಷ್ಠ ಅಂದರೆ 44.4ರಷ್ಟು ಮಂದಿಯಲ್ಲಿ ಮಾತ್ರ ಕೋವಿಡ್ ಪ್ರತಿಕಾಯ ಅಭಿವೃದ್ಧಿ ಹೊಂದಿದೆ. ಅಸ್ಸಾಂನಲ್ಲಿ ಶೇಕಡ 50.3 ಹಾಗೂ ಮಹಾರಾಷ್ಟ್ರದಲ್ಲಿ ಈ ಪ್ರಮಾಣ ಶೇಕಡ 58ರಷ್ಟಿದೆ.

ಐಸಿಎಂಆರ್ ದೇಶದ 70 ಜಿಲ್ಲೆಗಳಲ್ಲಿ ನಡೆಸಿದ ಸೆರೊ ಸಮೀಕ್ಷೆಯ ವಿವರಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದೆ. ರಾಜಸ್ಥಾನದಲ್ಲಿ 75.9 ಹಾಗೂ ಬಿಹಾರದಲ್ಲಿ ಶೇಕಡ 75.3ರಷ್ಟು ಮಂದಿಯಲ್ಲಿ ಪ್ರತಿಕಾಯ ಕಂಡುಬಂದಿದೆ. ಉಳಿದಂತೆ ಗುಜರಾತ್ (74.6), ಛತ್ತೀಸ್‌ಗಢ (73.1), ಉತ್ತರಾಖಂಡ (71), ಉತ್ತರ ಪ್ರದೇಶ (70.2), ಆಂಧ್ರಪ್ರದೇಶ (69.8) ಮತ್ತು ಕರ್ನಾಟಕ (69.2) ನಂತರದ ಸ್ಥಾನಗಳಲ್ಲಿವೆ. ತಮಿಳುನಾಡಿನಲ್ಲಿ ಈ ಪ್ರಮಾಣ ಶೇಕಡ 81.6 ಎಂದು ಸಮೀಕ್ಷೆಯಿಂದ ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News