ದೇರಳಕಟ್ಟೆಯಲ್ಲಿ ಆ್ಯಪಲ್ ಮಾರ್ಟ್‌ನ ನೂತನ ಮಳಿಗೆ ಉದ್ಘಾಟನೆ

Update: 2021-07-29 07:13 GMT

ಕೊಣಾಜೆ: ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ಬಳಿ ಆ್ಯಪಲ್ ಮಾರ್ಟ್ ಹೈಪರ್ ಮಾರ್ಕೆಟ್‌ನ ನೂತನ ಮಳಿಗೆಯು ಗುರುವಾರ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ನಾಟೆಕಲ್‌ನ ಉದ್ಯಮಿ ಪಿ.ಎಂ. ಕುಂಞಿ ಬಾವ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಕಿಶೋರ್‌ ಕುಮಾರ್ ಸಿ.ಕೆ., ಅವರು ಆ್ಯಪಲ್ ಮೊಬೈಲ್ ಮಾರ್ಟ್‌ ನ ವಿಭಾಗವನ್ನು ಉದ್ಘಾಟಿಸಿ, ಅಭಿವೃದ್ಧಿ ಹೊಂದುತ್ತಿರುವ ಈ ವ್ಯಾಪ್ತಿಯಲ್ಲಿ ಆಧುನಿಕವಾಗಿ ಆ್ಯಪಲ್ ಮಾರ್ಟ್ ನ ನೂತನ ಮಳಿಗೆಯು ಶುಭಾರಂಭಗೊಂಡಿರುವುದು ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ನೂತನ ಮಳಿಗೆಯು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಾಟೆಕಲ್ ವುಡ್ ಇಂಡಸ್ಟ್ರೀಸ್‌ನ ಕೆ. ಅಬೂಬಕರ್ ಅವರು ರಿಮ್ಸ್ ಕೌಂಟರ್ ಉದ್ಘಾಟಿಸಿ, ಶುಭ ಹಾರೈಸಿದರು. ಕೊಣಾಜೆಯ ಮಂಗಳಾ ಟ್ರೇಡರ್ಸ್‌ ನ ಜಾನ್ ವಿಕ್ಟರ್ ಮೆಂಡೊನ್ಸ ಅವರು ವೆಜ್ ಆ್ಯಂಡ್ ಫ್ರೂಟ್ಸ್ ಕೌಂಟರ್ ಉದ್ಘಾಟಿಸಿದರು.  ಈ ಸಂದರ್ಭ ಆ್ಯಪಲ್ ಮಾರ್ಟ್‌ ಹಾಗೂ ಎ.ಕೆ. ಗ್ರೂಪ್ ಆಫ್ ಸಮೂಹದ ಚೇರ್‌ಮನ್  ಎಂ. ಅಹ್ಮದ್ ಉಪಸ್ಥಿತರಿದ್ದರು.  ಆ್ಯಪಲ್ ಮಾರ್ಟ್‌ ನ ಪಾಲುದಾರರು, ಗಣ್ಯರು ಉಪಸ್ಥಿತರಿದ್ದರು.

ಒಂದು ವರ್ಷದ ಆಫರ್ 

ನೂತನ ಮಳಿಗೆಯಲ್ಲಿ ಖರೀದಿದಾರರಿಗೆ ನೂತನ ಆಫರ್ 'ಒನ್ ಇಯರ್ ಫ್ರೀ ಶಾಪಿಂಗ್' ನ ಕೂಪನ್ ವ್ಯವಸ್ಥೆ ಮಾಡಲಾಗಿದ್ದು, ಆ.15 ರಂದು ಲಕ್ಕಿ ಡ್ರಾ ನಡೆಯಲಿದೆ. ವಿಜೇತರಾದ ಹತ್ತು ಜನರಿಗೆ ಒಂದು ವರ್ಷದ ವರೆಗಿನ ತಿಂಗಳಿಗೊಮ್ಮೆ ನಿಗಧಿತ ಮೊತ್ತದ ವಸ್ತುಗಳ ಉಚಿತ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಮಿತದರದಲ್ಲಿ ಲಭ್ಯ

ನೂತನ ಮಳಿಗೆಯಲ್ಲಿ‌ ಉತ್ತಮ ಗುಣಮಟ್ಟದ ಮತ್ತು ಬಹು ಬ್ರಾಂಡ್ ಗಳ  ಗ್ಲಾಸ್‌ವೇರ್, ಗ್ರಹೋಪಯೋಗಿ ವಸ್ತುಗಳು, ಲೇಖನ ಸಾಮಗ್ರಿಗಳು, ಆಟಿಕೆ ಮತ್ತು‌ ಕ್ರೀಡಾ ಸಾಮಗ್ರಿಗಳು, ಇಂಪೋರ್ಟೆಡ್ ಮತ್ತು‌ ಇಂಡಿಯನ್ ಚಾಕೊಲೇಟ್, ತಂಪು ಪಾನೀಯಗಳು, ದಿನಸಿ ಸಾಮಗ್ರಿಗಳು, ಆರ್ಗ್ಯಾನಿಕ್ ಬೇಳೆಕಾಳುಗಳು ಹಾಗೂ ಇನ್ನಿತರ ವಸ್ತುಗಳು ಮಿತದರದಲ್ಲಿ ಲಭ್ಯವಿದೆ.

ಇದಲ್ಲದೇ ನಗರದ ಪ್ರತಿಷ್ಠಿತ ಡ್ರೈ ಫ್ರೂಟ್ಸ್ ವಿತರಕರಾದ ರೀಮ್ಸ್ ಸಂಸ್ಥೆಯ ಕೌಂಟರ್ ನಲ್ಲಿ ಉತ್ತಮ ಗುಣಮಟ್ಟದ ಬಹು ಶ್ರೇಣಿಯ ಡ್ರೈ ಫ್ರೂಟ್ಸ್ ಮತ್ತು‌ ಹೊಸದಾಗಿ‌ ಶುಭಾರಂಭಗೊಂಡ ಆ್ಯಪಲ್ ಮೊಬೈಲ್ ಮಾರ್ಟ್ ನಲ್ಲಿ‌ ಬಹು ಬ್ರಾಂಡ್ ಗಳ ಮೊಬೈಲ್ ಪೋನ್ ಮತ್ತು ಬಿಡಿಭಾಗಗಳು ಒಂದೇ ಸೂರಿನಡಿ ಖರೀದಿಸಲು ಅವಕಾಶವಿದೆ.

ಆ್ಯಪಲ್ ಮಾರ್ಟ್‌ನ ಮಳಿಗೆಗಳು ಈಗಾಗಲೇ ಮಂಗಳೂರಿನ ಅತ್ತಾವರ, ಕದ್ರಿ, ಪದವಿನಂಗಡಿ, ವೆಲೆನ್ಸಿಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದು ಇದೀಗ ನಾಟೆಕಲ್ ಬಳಿ ನೂತನ ಮಳಿಗೆ ಶುಭಾರಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News