ಹೊಸ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಉತ್ತರಪ್ರದೇಶದಲ್ಲಿ ಯಾತ್ರೆ: ಬಿಜೆಪಿ ಯೋಜನೆ

Update: 2021-07-29 09:24 GMT

ಹೊಸದಿಲ್ಲಿ: ಕೆಲವೇ ತಿಂಗಳುಗಳಲ್ಲಿ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ, ಇತ್ತೀಚೆಗೆ ಸಂಪುಟ ಪುನರ್ರಚನೆಯಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ರಾಜ್ಯದ ಏಳು ನಾಯಕರನ್ನು ಒಳಗೊಂಡ ಕಾರ್ಯಕ್ರಮವನ್ನು ಆಯೋಜಿಸಲು ಬಿಜೆಪಿ ಯೋಜಿಸುತ್ತಿದೆ.

ಬಿಜೆಪಿಯಿಂದ ಆರು ಹಾಗೂ  ಅಪ್ನಾ ದಳದ ಅನುಪ್ರಿಯಾ ಪಟೇಲ್ ಸೇರಿದಂತೆ 7 ಸಚಿವರು ಪಕ್ಷದ ಅಧ್ಯಕ್ಷ  ಜೆ.ಪಿ.ನಡ್ಡಾ ಅವರಿಂದ ಸೂಚನೆಗಳನ್ನು ಪಡೆದಿದ್ದಾರೆ ಹಾಗೂ  'ಸಾರ್ವಜನಿಕರಿಂದ ಆಶೀರ್ವಾದ ಪಡೆಯಲು' ಮೂರು-ನಾಲ್ಕು ಸಂಸದೀಯ ಕ್ಷೇತ್ರಗಳು ಹಾಗೂ  ನಾಲ್ಕು-ಐದು ಜಿಲ್ಲೆಗಳನ್ನು ಒಳಗೊಂಡ 300-400 ಕಿ.ಮೀ. ದೂರದ ಜನ ಆಶೀರ್ವಾದ್ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ .

ಯಾತ್ರೆಯು ಆಗಸ್ಟ್ 15 ರ ನಂತರ ನಡೆಯಲಿದ್ದು, ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸಚಿವರಿಗೆ ತಿಳಿಸಲಾಗಿದೆ.

ಇದಲ್ಲದೆ, ಪಕ್ಷವು ಆಗಸ್ಟ್ 5 ರಂದು ರಾಜ್ಯದಲ್ಲಿ ಅನ್ನ ಮಹೋತ್ಸವ್ (ಆಹಾರ ಧಾನ್ಯ ಹಬ್ಬ) ವನ್ನು ಆಚರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಸುಮಾರು 80,000 ಪಡಿತರ ವಿತರಕರೊಂದಿಗೆ ವೀಡಿಯೊ ಲಿಂಕ್ ಮೂಲಕ ಮಾತನಾಡುವ ನಿರೀಕ್ಷೆಯಿದೆ.

ಎಲ್ಲಾ ಸಂಸದರು ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಭೇಟಿ ನೀಡಲು ಹಾಗೂ  ಲಸಿಕೆಯ ಎರಡನೆಯ ಡೋಸ್ (ಅಥವಾ ಮೊದಲನೆಯ) ತೆಗೆದುಕೊಳ್ಳಲು ಪ್ರೇರೇಪಿಸುವಂತೆ ನಿರ್ದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News