ಒಲಿಂಪಿಕ್ಸ್: ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ ಮೇರಿ ಕೋಮ್

Update: 2021-07-29 10:46 GMT

ಟೋಕಿಯೊ: ಭಾರತದ ಹಿರಿಯ ಬಾಕ್ಸರ್ ಮೇರಿ ಕೋಮ್  ಟೋಕಿಯೊ ಒಲಿಂಪಿಕ್ ಗೇಮ್ಸ್ ನ  16 ನೇ ಸುತ್ತಿನ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ.  

ಗುರುವಾರ ನಡೆದ ಮಹಿಳೆಯರ ಫ್ಲೈ ವೇಟ್ 51 ಕೆಜಿ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್  ಸ್ಪರ್ಧೆಯಲ್ಲಿ ಮೇರಿ ಕೋಮ್ ಅವರು ಕೊಲಂಬಿಯಾದ ಇಂಗ್ರಿಟ್ ವೆಲೆನ್ಸಿಯಾ ವಿರುದ್ಧ 2-3 ಅಂತರದಿಂದ ಶರಣಾದರು. ಈ ಮೂಲಕ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ.

ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಮೂರನೇ ಹಾಗೂ ಅಂತಿಮ ರೌಂಡನ್ನು ಗೆದ್ದುಕೊಂಡರು. ಆದರೆ ಮೊದಲ ರೌಂಡ್ ನಲ್ಲಿನ 1-4  ಅಂತರದ ಸೋಲು ಅವರಿಗೆ ದುಬಾರಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News