×
Ad

ಜಾಲತಾಣಗಳಲ್ಲಿ ಮಾನಹಾನಿ: ಕ್ರಮಕ್ಕೆ ಆಗ್ರಹ

Update: 2021-07-29 18:54 IST

ಉಪ್ಪಿನಂಗಡಿ : ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ಮಾನಹಾನಿ ಮಾಡಲಾಗುತ್ತಿದ್ದು, ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಎನ್‍ಡಬ್ಲ್ಯೂಎಫ್ ನಿಯೋಗವು ಉಪ್ಪಿನಂಗಡಿ ಗ್ರಾಮಕರಣಿಕರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದೆ.

ಮಹಿಳೆಯರ ಭಾವಚಿತ್ರ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ಕೆಲ ಸಂಘಪರಿವಾರದ ಕಾರ್ಯಕರ್ತರು ತಮ್ಮ ವಿಕೃತ ಮಾನಸಿಕತೆ ತೋರಿಸುತ್ತಿದ್ದಾರೆ. ಆದ್ದರಿಂದ ಅಂತವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಎನ್‍ಡಬ್ಲ್ಯೂಎಫ್ ತಿಳಿಸಿದೆ. ಮನವಿ ಸಲ್ಲಿಸಿದ ನಿಯೋಗದಲ್ಲಿ ಎನ್.ಡಬ್ಲ್ಯೂ.ಎಫ್ ಉಪ್ಪಿನಂಗಡಿ ಘಟಕದ ಅಧ್ಯಕ್ಷೆ ಮುಮ್ತಾಝ್ ಇಕ್ಬಾಲ್, ಸದಸ್ಯರಾದ ಝರೀನಾ ಇಕ್ಬಾಲ್ ಮತ್ತು ನಫೀಸಾ  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News