ಕುಂದಾಪುರ ಪುರಸಭೆ ಜಾಗ ಖರೀದಿ ಹಗರಣದ ತನಿಖೆಗೆ ಸದಸ್ಯೆ ಒತ್ತಾಯ

Update: 2021-07-29 14:19 GMT

ಕುಂದಾಪುರ, ಜು.29: ಕುಂದಾಪುರ ಪುರಸಭಾ ವ್ಯಾಪ್ತಿಯ ಒಳಚರಂಡಿ ಕಾಮಗಾರಿಯ ವೆಟ್‌ವೆಲ್ ನಿರ್ಮಾಣಕ್ಕಾಗಿ ಅಗತ್ಯವಿರುವ 26 ಸೆನ್ಸ್ ಜಾಗವನ್ನು ಐದು ಪಟ್ಟು ಹೆಚ್ಚು ಹಣ ಕೊಟ್ಟು ಪುರಸಭೆ ಪಡೆದಿರುವುದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿ ಎಂದು ಕುಂದಾಪುರ ಪುರಸಭೆಯ ಸದಸ್ಯೆ ಪಿ.ದೇವಕಿ ಸಣ್ಣಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ ಪುರಸಭೆಯ ಸರ್ವೆನಂಬರ್ 3321ರಲ್ಲಿ 5ಸೆನ್ಸ್, ಸ.ನಂ.33.5ಪಿ1ರಲ್ಲಿ 14 ಸೆನ್ಸ್ ಹಾಗೂ ಸ.ನಂ.3322ರಲ್ಲಿ 12 ಸೆನ್ಸ್ ಜಾಗ ಸೇರಿ ಒಟ್ಟು 32 ಸೆನ್ಸ್ ಜಾಗವನ್ನು ಗುರುತಿಸಲಾಗಿದ್ದು, ಇದರಲ್ಲಿ 26 ಸೆನ್ಸ್ ಜಾಗವನ್ನು ಕಲ್ಪನಾ ನಾಗರ್‌ಜ ಇವರಿಂದ 95 ಲಕ್ಷ ರೂ.ಗಳಿಗೆ ಖರೀದಿಸಲಾಗಿದೆ. ಇದು ಮೇಲ್ನೋಟಕ್ಕೆ ಅಕ್ರಮ ವ್ಯವಹಾರ ಎಂದು ತಿಳಿದುಬಂದಿದೆ. ಜೊತೆಗೆ ಈ ಬಗ್ಗೆ ಕಳೆದ ಫೆಬ್ರವರಿ ಹಾಗೂ ಎಪ್ರಿಲ್ ತಿಂಗಳಲ್ಲಿ ಖರೀದಿ ವ್ಯವಹಾರ ನಡೆದಿದ್ದು, ಪುರಸಭೆಯ ಸದಸ್ಯರ ಗಮನಕ್ಕೆ ತಾರದೇ ಅಧಿಕಾರಿಗಳು ವ್ಯವಹಾರ ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ. ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸುವಂತೆ ಸದಸ್ಯೆ ದೇವಕಿ ಸಣ್ಣಯ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ ಹಣವನ್ನು ಸುಖಾಸುಮ್ಮನೆ ಪೋಲು ಮಾಡುವ ಅಧಿಕಾರಿಗಳ ದುರ್ವರ್ತನೆಯನ್ನು ಸಹ ಅವರು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News