×
Ad

ದ.ಕ. ಜಿಲ್ಲೆ: ಕೋವಿಡ್‌ಗೆ ಎಂಟು ಬಲಿ; 396 ಮಂದಿಗೆ ಕೊರೋನ ಸೋಂಕು

Update: 2021-07-29 20:31 IST

ಮಂಗಳೂರು, ಜು.29: ದ.ಕ. ಜಿಲ್ಲೆಯಲ್ಲಿ ಗುರುವಾರ ಕೋವಿಡ್‌ನಿಂದಾಗಿ ಎಂಟು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಹೊಸದಾಗಿ 396 ಸೋಂಕು ಪ್ರಕರಣಗಳು ಪತ್ತೆಯಾಗಿದೆ.

ಜಿಲ್ಲೆಯಲ್ಲಿ 200 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ನಿಂದಾಗಿ ಜಿಲ್ಲೆಯಲ್ಲಿ ಒಟ್ಟು 1,410 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 99,660 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 95,699 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 2,551 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.

1,62,316 ಮಂದಿಗೆ ಕೋವಿಡ್ ಲಸಿಕೆ

ದ.ಕ. ಜಿಲ್ಲೆಯ ಕೋವಿಡ್-19 ಲಸಿಕಾ ಅಭಿಯಾನದಡಿ ಇದುವರೆಗೂ 1,62,316 ಮಂದಿಗೆ ಲಸಿಕೆ ನೀಡಲಾಗಿದೆ. ಮೊದಲನೆಯ ಡೋಸ್ ಲಸಿಕೆಯನ್ನು ಈವರೆಗೆ ಒಟ್ಟು 8,94,571 ಫಲಾನುಭವಿಗಳಿಗೆ ಹಾಗೂ ಎರಡನೇ ಡೋಸ್ ಲಸಿಕೆಯನ್ನು ಒಟ್ಟು 2,67,745 ಮಂದಿಗೆ ನೀಡಲಾಗಿದೆ. ಲಸಿಕೆ ಪಡೆದವರಲ್ಲಿ 18 ರಿಂದ 44 ವರ್ಷದ ವಯೋಮಾನದವರ ಗುರಿಯಲ್ಲಿ ಮೊದಲನೆಯ ಡೋಸ್ ಶೇ.32.35 ಹಾಗೂ ಎರಡನೇ ಡೋಸ್ ಶೇ.4.83 ನೀಡಲಾಗಿದೆ.

45 ವರ್ಷದಿಂದ 59 ವರ್ಷದೊಳಗಿನ ಫಲಾನುಭವಿಗಳ ಗುರಿಯಲ್ಲಿ ಪ್ರಥಮ ಡೋಸ್‌ನ್ನು ಶೇ. 65.40 ಹಾಗೂ ಎರಡನೇ ಡೋಸ್ ಶೇ.38.58 ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರ ಗುರಿಯಲ್ಲಿ ಪ್ರಥಮ ಡೋಸ್ ಶೇ. 92.70 ಹಾಗೂ ಎರಡನೇ ಡೋಸ್ ಶೇ.55.52 ನೀಡಲಾಗಿದೆ.

ಜು.29ರಂದು ಜಿಲ್ಲೆಯಲ್ಲಿ 3,256 ಮಂದಿ ಲಸಿಕೆ ಪಡೆದಿದ್ದಾರೆ. ಸರಕಾರಿ ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲೂ ಸರಕಾರ ನಿಗದಿಪಡಿಸಿರುವ ದರದಂತೆ ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್ ಲಸಿಕೆಗಳನ್ನು ನಗರದ ಎಜೆ, ಕೆಎಂಸಿ ಅತ್ತಾವರ, ಕೆಎಂಸಿ ಜ್ಯೋತಿ, ಯೆನಪೊಯ ಮೆಡಿಕಲ್ ಕಾಲೇಜು, ಯನಪೋಯ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವೆನ್ಲಾಕ್ ಆಯುಷ್ ಬ್ಲಾಕ್‌ನಲ್ಲಿ ಜು.30ಕ್ಕೆ ಲಸಿಕಾ ಶಿಬಿರ ಇಲ್ಲ

ಮಂಗಳೂರು ನಗರದ ವೆನ್ಲಾಕ್ ಆಯುಷ್ ಬ್ಲಾಕ್‌ನಲ್ಲಿ ಜು.30ರಂದು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿಲ್ಲದ ಕಾರಣ ಆಯುಷ್ ಬ್ಲಾಕ್‌ನಲ್ಲಿ ಯಾವುದೇ ಲಸಿಕೆ ಇರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News