ಅ.1 : ಗೋಳ್ತಮಜಲ್ ನಲ್ಲಿ ರಕ್ತದಾನ ಶಿಬಿರ

Update: 2021-07-29 15:31 GMT

ಬಂಟ್ವಾಳ : ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಆಶ್ರಯದಲ್ಲಿ 'ವರುಷ ಮೂರು ಶಿಬಿರ ನೂರು' ಎಂಬ ಕಲ್ಪನೆಯಲ್ಲಿ ಅ.1ರಂದು ರಕ್ತದಾನ ಶಿಬಿರ ನಡೆಯಲಿದೆ.

ಹಜಾಜ್ ಸ್ಪೋರ್ಟ್ಸ್ ಕ್ಲಬ್ ಗೋಳ್ತಮಜಲ್, ವಿಟ್ಲ ವ್ಯವಸಾಯ ಸಹಕಾರಿ ಸೇವಾ ಸಂಘ, ಟಿಕ್ಕ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಕಲ್ಲಡ್ಕ, ಲ್ಯಾಂಪ್ ಸೊಸೈಟಿ ವಿಟ್ಲ ಮತ್ತು ಝಿಗ್ ಝ್ಯಾಗ್ ನಿಟಿಲಾಪುರ ಇವರ ಸಹಯೋಗದೊಂದಿಗೆ ಎ.ಜೆ.ಆಸ್ಪತ್ರೆ ಮಂಗಳೂರು ಇವರ ಸಹಕಾರದಲ್ಲಿ  ನೂರನೇ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ಆ.1ರಂದು ಬೆಳಗ್ಗೆ ಗಂಟೆ 9 ಗಂಟೆಯಿಂದ ಅಪರಾಹ್ನ 1.30ರ ತನಕ ಹಜಾಜ್ ಸ್ಪೋರ್ಟ್ಸ್ ಕ್ಲಬ್ ಕಾರ್ಯಾಲಯದಲ್ಲಿ ನಡೆಯಲಿದೆ ಎಂದು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಮುಖ್ಯ ಕಾರ್ಯನಿರ್ವಾಹಕ ಅಬ್ದುಲ್ ಹಮೀದ್ ಗೋಳ್ತಮಜಲ್  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News