×
Ad

ಜು.31ರಂದು ವಿದ್ಯುತ್ ವ್ಯತ್ಯಯ

Update: 2021-07-29 21:42 IST

ಮಂಗಳೂರು, ಜು.29: ನಗರದ 33/11 ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಪಾಂಡೇಶ್ವರ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.

ಇದರಿಂದ ಜು.31ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಎ.ಬಿ. ಶೆಟ್ಟಿ ಸರ್ಕಲ್, ಭಾರತೀಯ ವಿಶ್ವವಿದ್ಯಾಭವನ, ಎಸ್.ಪಿ.ಆಫೀಸ್, ಪಾಂಡೇಶ್ವರ ರಸ್ತೆ, ಪಾಂಡೇಶ್ವರ ನ್ಯೂ ರಸ್ತೆ, ಮಹಾಲಿಂಗೇಶ್ವರ ಟೆಂಪಲ್, ಅಮೃತನಗರ, ರೋಸಾರಿಯೋ ಚರ್ಚ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News