ಆ.1: ಸಾಹಿತಿ ದಿ.ಬಿ.ಎಂ. ಇಚ್ಲಂಗೋಡ್ ಸ್ಮರಣಾರ್ಥ ಬ್ಯಾರಿ ಕವಿಗೋಷ್ಠಿ

Update: 2021-07-29 16:14 GMT

ಮಂಗಳೂರು, ಜು.29: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ಆ.1ರಂದು ಸಂಜೆ 7:30ಕ್ಕೆ ಖ್ಯಾತ ಸಾಹಿತಿ ಮರ್ಹೂಮ್ ಬಿ.ಎಂ. ಇಚ್ಲಂಗೋಡ್ ಅವರ ನೆನಪಿಗಾಗಿ ‘ಬ್ಯಾರಿ ಕವಿಗೋಷ್ಠಿ’ ಕಾರ್ಯಕ್ರಮವನ್ನು ಅಕಾಡಮಿಯ ಯುಟ್ಯೂಬ್ ಮತ್ತು ಫೇಸ್‌ಬುಕ್ ಚಾನೆಲ್ ಮುಖಾಂತರ ನೇರ ಪ್ರಸಾರ ಮಾಡಲಿದೆ.

ಬ್ಯಾರಿ ಭಾಷೆಯ ಪ್ರಸಿದ್ಧ ಕವಿಗಳಾದ ಎಸ್.ಬಿ. ದಾರಿಮಿ, ಜಲೀಲ್ ಮುಕ್ರಿ, ಎ.ಕೆ. ಕುಕ್ಕಿಲ, ಮುಹಮ್ಮದ್ ಶರೀಫ್ ನಿರ್ಮುಂಜೆ, ಬಶೀರ್ ಅಹ್ಮದ್ ಕಿನ್ಯ, ಅಝೀಝ್ ಪುಣಚ, ರಶೀದ್ ನಂದಾವರ, ಆಯಿಷಾ ಯು.ಕೆ. ಮತ್ತು ರಹೀನಾ ತೊಕ್ಕೊಟ್ಟು ಭಾಗವಹಿಸಲಿದ್ದಾರೆ.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ, ಕವಿ ಮುಹಮ್ಮದ್ ಬಡ್ಡೂರು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ್ ವಹಿಸಲಿದ್ದು. ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿ ಅಕಾಡಮಿಯ ಸದಸ್ಯ ಶಂಶೀರ್ ಬುಡೋಳಿ ಕಾರ್ಯ ನಿರ್ವಹಿಸಲಿದ್ದಾರೆ.

ಆಸಕ್ತರು ಕಾರ್ಯಕ್ರಮವನ್ನು ಅಕಾಡಮಿ ಯುಟ್ಯೂಬ್ ಹಾಗೂ ಫೇಸ್‌ಬುಕ್ ಚಾನಲ್‌ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಅಕಾಡಮಿ ರಿಜಿಸ್ಟ್ರಾರ್ ಪೂರ್ಣಿಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News