ಮುಡಿಪು ಬ್ಲಾಕ್ ಕಾಂಗ್ರೆಸ್ ನಿಂದ ಅಮೀರ್ ತುಂಬೆಗೆ ಸಂತಾಪ ಸಭೆ

Update: 2021-07-29 16:17 GMT

ಬಂಟ್ವಾಳ : ಮುಡಿಪು ಬ್ಲಾಕ್ ಕಾಂಗ್ರೆಸ್ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಇತ್ತೀಚಿಗೆ ನಿಧನರಾದ ರಾಜ್ಯ ಇಂಟಕ್ ಉಪಾಧ್ಯಕ್ಷ ಡಾ. ಅಮೀರ್ ಅಹ್ಮದ್ ತುಂಬೆ ಅವರಿಗೆ ಸಂತಾಪ ಸಭೆ ತುಂಬೆ ವಳವೂರಿನ ಅರಫಾ ಹಾಲ್ ನಲ್ಲಿ ಗುರುವಾರ ನಡೆಯಿತು.

ಸಭೆಯಲ್ಲಿ ಶಾಸಕ ಯು.ಟಿ.ಖಾದರ್ ಮಾತನಾಡಿ, ಎಲ್ಲರ ಕಷ್ಟ ಸುಖದ ಜೊತೆ ಭಾಗಿಯಾಗುವ ಕಾಂಗ್ರೆಸ್ ಕಾರ್ಯಕರ್ತ ಅಮೀರ್ ತುಂಬೆ ಅವರ ಅಕಾಲಿಕ ಮರಣದಿಂದ ಪಕ್ಷಕ್ಕೆ ನಷ್ಟವಾಗಿದೆ ಎಂದು ಅವರು ಹೇಳಿದರು.

ಪರೋಪಕಾರಿಯಾಗಿ, ಬಡವರ ಸೇವೆ ಮಾಡುವ ಮೂಲಕ ವಿಶೇಷ ವ್ಯಕ್ತಿತ್ವವುಳ್ಳ ಅವರು ರಾಜಕೀಯವಾಗಿ ಚತುರನಾಗಿ ಗುರುತಿಸಿಕೊಂಡಿ ದ್ದರು. ಪ್ರಮಾಣಿಕವಾಗಿ ಜನಸೇವೆ ಮಾಡಿದರೆ ಜನರು ಸಾವಿನ ಬಳಿಕವೂ ನೆನಪು ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಅಮೀರ್ ತುಂಬೆ ಅವರ ಸಂತಾಪ ಸಭೆ ಸಾಕ್ಷಿಯಾಗಿದೆ. ಹುಟ್ಟು ಸಾವಿನ ಮಧ್ಯೆ ಜನರಲ್ಲಿ ನೆನಪು ಇಟ್ಟುಕೊಳ್ಳುವ ರೀತಿಯಲ್ಲಿ ಜೀವನ ಮಾಡುವುದೇ ಸಾಧನೆಯಾಗುತ್ತದೆ ಎಂದು ಅವರು ತಿಳಿಸಿದರು.

ತುಂಬೆ ವಲಯ ಕಾಂಗ್ರೆಸ್ ನ ವತಿಯಿಂದ ಕುಚ್ಚಿಗುಡ್ಡೆ ರಸ್ತೆಗೆ ದಿ. ಅಮೀರ್ ತುಂಬೆ ಅವರ ಹೆಸರನ್ನು ನಾಮಕರಣ ಮಾಡುವ ಮೂಲಕ ಅಮೀರ್ ತುಂಬೆ ಅವರ ನೆನಪು ಸದಾ ನಮ್ಮ ಜೊತೆಗೆ ಇರುವಂತೆ ಮಾಡಬೇಕು ಎಂದು ಅವರು ತಿಳಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಎಲ್ಲಾ ಜಾತಿ ಧರ್ಮದವರೊಂದಿಗೆ ಅನನ್ಯತೆಯಿಂದ ಇದ್ದ ಅಮೀರ್ ಅವರು ಕೊಡುಗೈ ದಾನಿಯೂ ಆಗಿದ್ದರು. ಅಮೀರ್ ತುಂಬೆ ಅವರ ಅಕಾಲಿಕ ಮರಣ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.

ರಾಜಕೀಯ, ಸಾಮಾಜಿಕದ ಜೊತೆಗೆ ಧಾರ್ಮಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿದ್ದ ಅವರು ಜಿಲ್ಲಾ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದರು. ಕೊರೋನ ಅಲೆಯಿಂದ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಗಳಿಗೆ ತಂಡವನ್ನು ರಚಿಸಿ ನಿರಂತರ ಆಹಾರ ಸಾಮಗ್ರಿಗಳನ್ನು ಒದಗಿಸುವ ಮೂಲಕ ನೆರವಾಗಿರುವ ಓರ್ವ ಶ್ರಮ ಜೀವಿ ಎಂದರು.

ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಮುಡಿಪು ಬ್ಲಾಕ್ ಕಾಂಗ್ರೇಸ್ ಘಟಕದ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಇಮ್ತಿಯಾಝ್ ತುಂಬೆ ಕಾರ್ಯಕ್ರಮ ಸಂಘಟಿಸಿದ್ದರು.

ಸಂತಾಪ‌ ಸಭೆಯಲ್ಲಿ ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಜಿ.ಪಂ. ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಮತಾ ಗಟ್ಟಿ , ತಾ.ಪಂ. ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ  ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಜಿ.ಪಂ. ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ವೃಂದ ಪೂಜಾರಿ, ಮುಹಮ್ಮದ್ ಮೋನು, ಪ್ರವೀಣ್ ಆಳ್ವ, ರಝಾಕ್ ಕುಕ್ಕಾಜೆ,  ಜಲೀಲ್, ನಾಸೀರ್, ನವಾಝ್, ಸಿದ್ದೀಕ್ ಪಾರೆ ಜಗದೀಶ್ ಗಟ್ಟಿ, ಗಣೇಶ್ ಸಾಲಿಯಾನ್ , ರಶೀದ್ ತುಂಬೆ, ಮೋನಪ್ಪ ಮಜಿ, ದೇವದಾಸ್ ಪರ್ಲಕ್ಯ, ಗೋಪಾಲಕೃಷ್ಣ, ಪ್ರಕಾಶ್ ಶೆಟ್ಟಿ ಶ್ರೀಶೈಲ, ಹೈದರ್ ಕೈರಂಗಳ, ರಫೀಕ್ ಪೆರಿಮಾರ್,  ಟಿ.ಕೆ.ಶರೀಫ್, ಅರುಣ್ ಡಿಸೋಜ, ನಿಸಾರ್ ವಳವೂರು, ರಫೀಕ್, ಸದಾಶಿವ ಡಿ‌.ತುಂಬೆ,  ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News