ಕಿನ್ಯಾ : ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಆಯ್ಕೆ

Update: 2021-07-29 17:12 GMT

ಉಳ್ಳಾಲ: ಕಿನ್ಯಾ  ಗ್ರಾಮ ಯುವ  ಕಾಂಗ್ರೆಸ್ ಸಮಿತಿ ಸಭೆಯು ಕಿನ್ಯಾ ಯುವ ಕಾಂಗ್ರೆಸ್  ಅಧ್ಯಕ್ಷ  ಹಾರಿಸ್ ಅಹ್ಮದ್  ಅಧ್ಯಕ್ಷತೆಯಲ್ಲಿ ನಡೆಯಿತು.

ಮಾಜಿ ಕಿನ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷ  ಹಮೀದ್ ಕಿನ್ಯಾ  ಮಾತನಾಡಿ ಪಕ್ಷದ ಕಾರ್ಯ ಚಟುವಟಿಕೆ ಬಗ್ಗೆ ವಿವರಿಸಿದರು. ಸಮಿತಿಯ ವಿವರಣೆಯನ್ನ ಆಶಿಕ್ ಅಶ್ಫಾಕ್ ಕಿನ್ಯಾ ನೀಡಿದರು. ಬಳಿಕ ನೂತನ ಸಮಿತಿ ರಚಿಸಲಾಯಿತು.

ಕಿನ್ಯಾ ಗ್ರಾಮದ 3ನೇ ವಾರ್ಡ್ ನ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸಮೀರ್ ಮೀಂಪ್ರಿ, ಉಪಾಧ್ಯಕ್ಷರಾಗಿ ತಂಶೀರ್, ಸವಾದ್ ಪ್ರಧಾನ ಕಾರ್ಯದರ್ಶಿ ಯಾಗಿ ಬಾಶಿತ್ ಮೀಂಪ್ರಿ ,ಕಾರ್ಯದರ್ಶಿಯಾಗಿ ಸುಹೈಲ್ ಮೀಂಪ್ರಿ, ಇಂತಿಶಾಮ್ ಮೀಂಪ್ರಿ, ಸಂಘಟನಾ ಕಾರ್ಯದರ್ಶಿಯಾಗಿ ನಿಯಾಝ್ ಸಂಕೇಶ್ , ಮೀಡಿಯಾ ಉಸ್ತುವಾರಿಯಾಗಿ ನಿಸಾರ್, ಸೋಶಿಯಲ್ ವರ್ಕ್ ಉಸ್ತುವಾರಿ ಯಾಗಿ  ಆಫ್ವನ್ ಮೀಂಪ್ರಿ  ಹಾಗೂ ತಾಸೀರ್ ಆಯ್ಕೆಯಾದರು.

ಈ  ಸಂದರ್ಭ ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಇಜಾಝ್, ಯುವ ಕಾಂಗ್ರೆಸ್ ಕೋಶಾಧಿಕಾರಿ ನಿಜಾಮ್ ಕುರಿಯ, ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ನೌಫಲ್ ಎ.ಪಿ ನಗರ, ಕಾಂಗ್ರೆಸ್ ಕಿನ್ಯಾ ಗ್ರಾಮ ಸಮಿತಿ ಕಾರ್ಯದರ್ಶಿ ಶಮೀರ್ ಸಾಗ್  ಹಾಗೂ ಕಿನ್ಯಾ ಗ್ರಾಮ ಸಮಿತಿ ಉಪಾಧ್ಯಕ್ಷ ಹಮೀದ್ ಮೀಂಪ್ರಿ, ಕಾಂಗ್ರೆಸ್ ಬೂತ್ ಸಮಿತಿ ಕಾರ್ಯದರ್ಶಿ ಹನೀಫ್, 4ನೇ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಉಬೈದ್ ರಹ್ಮತ್ ನಗರ, ಕಾಂಗ್ರೆಸ್ ಮುಖಂಡರಾದ ರಫೀಕ್ ಮೀಂಪ್ರಿ, ಸತ್ತಾರ್ ಸಂಕೇಶ್ ವಿವಿಧ  ಘಟಕಗಳ ಪಧಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News