​ಐಟಿ ಪಾರ್ಕ್ ನಿರ್ಮಾಣ ನಗರ ಪಾಲಿಕೆಯ ಕೆಲಸವಲ್ಲ : ಮುನೀರ್ ಕಾಟಿಪಳ್ಳ

Update: 2021-07-29 17:18 GMT

ಮಂಗಳೂರು, ಜು. 29: ಐಟಿ ಪಾರ್ಕ್ ನಿರ್ಮಾಣ, ಭೂಸ್ವಾಧೀನ ನಗರ ಪಾಲಿಕೆಯ ಕೆಲಸ ಅಲ್ಲ. ಅದಕ್ಕಾಗಿ ರಾಜ್ಯ ಸರಕಾರ, ಭೂ ಸ್ವಾಧೀನ ಮಾಡಲು ಕೆಐಎಡಿಬಿ ಇದೆ. ಶಾಸಕ ಭರತ್ ಶೆಟ್ಟರಿಗೆ ತನ್ನ ಕ್ಷೇತ್ರದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಆಸಕ್ತಿ ಇದ್ದರೆ ರಾಜ್ಯ ಸರಕಾರ ಮಟ್ಟದಲ್ಲಿ ಪ್ರಯತ್ನ ನಡೆಸಬೇಕು ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಪ್ರಕಟನೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಪಾಲಿಕೆಗೆ ಇಂತಹ ಅಜೆಂಡಾಗಳನ್ನು ಅವರು ಹೇರುವಂತಿಲ್ಲ. ಹೇರಿದರೆ ಪಾಲಿಕೆ ಆಡಳಿತ ಅದನ್ನು ಮುಲಾಜಿಲ್ಲದೆ ತಿರಸ್ಕರಿಸಬೇಕು ಅದಲ್ಲದೆ ಪೆಬ್ರವರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಗಿನ ಮೇಯರ್ ದಿವಾಕರ ಪಾಂಡೇಶ್ವರ, ಈ ಅಜೆಂಡಾ ಟಿಪ್ಪಣಿಯನ್ನು ತಿರಸ್ಕರಿಸಿದ್ದರು. ಅಗತ್ಯ ಇದ್ದರೆ ಶಾಸಕರು ಗುರುತು ಮಾಡಿದ್ದ ಜಮೀನು ಪರಿಶೀಲನೆಗಾಗಿ ಸಮಿತಿ ರಚಿಸುವುದಾಗಿ ರೂಲಿಂಗ್ ನೀಡಿದ್ದರು. ಈಗ ಏಕಾಏಕಿ ಯಾವ ಸಮಿತಿಯನ್ನೂ ರಚಿಸದೆ ಅದೇ ಟಿಪ್ಪಣಿಯನ್ನು ಯಥಾರೂಪದಲ್ಲಿ ಅಜೆಂಡಾದಲ್ಲಿ ಇಟ್ಟು, ಅನುಮತಿ ಪೂರ್ವವಾಗಿ ಅಂಗೀಕರಿಸಿ ರಾಜ್ಯ ಸರಕಾರಕ್ಕೆ ಕಳುಹಿಸಿದ್ದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಇಂದಿನ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ವಿರೋಧಿಸಿದರೂ, ಆಕ್ಷೇಪ ಮಾಡಿದರೂ ಕಡೆಗಣಿಸಿ ಅಜೆಂಡಾ ಅಂಗೀಕರಿಸಿದ್ದು ಯಾಕೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಉತ್ತರಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಇಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ವಿರೋಧಿಸಿ, ಪ್ರಶ್ನೆಗಳನ್ನು ಎತ್ತಿದರೂ, ಅದಕ್ಕೆಲ್ಲ ತಿಪ್ಪೆಸಾರಿಸಿ ಐಟಿ ಪಾರ್ಕ್, ಟಿಡಿಆರ್ ಹಗರಣದ ಅನುಮತಿ ಪೂರ್ವ ಅಜೆಂಡಾ ಅಂಗೀಕರಿಸಲಾಗಿದೆ. ಇದಕ್ಕೆ ನಾಳೆ ಕಾನೂನಿನ ಮುಂದೆ ಉತ್ತರಿಸಬೇಕಾಗುತ್ತದೆ ಎಂದವರು ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News