×
Ad

ವಿಟ್ಲ; ಹೊರೈಝನ್ ಶಾಲೆಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Update: 2021-07-29 23:12 IST

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯ ಅಧೀನದಲ್ಲಿರುವ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಶಾಲೆಯ ಅಧ್ಯಕ್ಷರಾದ  ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮೇಗಿನಪೇಟೆ, ಕಾರ್ಯದರ್ಶಿ ಇಸ್ಮಾಯಿಲ್ ಪರ್ತಿಪ್ಪಾಡಿ, ಮಾಜಿ ಅಧ್ಯಕ್ಷ ಇಬ್ರಾಹಿಂ ಹಳೆಮನೆ, ಸಂಚಾಲಕ ಅಬೂಬಕರ್ ನೋಟರಿ, ಶಾಲೆಯ ಉಪಾಧ್ಯಕ್ಷ  ಗಫೂರ್ ಮೇಗಿನಪೇಟೆ, ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಕೋಶಾಧಿಕಾರಿ  ವಿ.ಎಚ್. ಅಶ್ರಫ್ , ಮೇಲ್ವಿಚಾರಕ ವಿ.ಕೆ.ಎಂ ಅಶ್ರಫ್, ಟ್ರಷ್ಠಿಗಳಾದ ಶೇಖ್ ಆದಂ ಸಾಹೇಬ್, ಸಿದ್ದೀಕ್ ಮಾಲಮೂಲೆ ವಿ.ಎ.ರಶೀದ್, ಅಬ್ದುಲ್ ರಹಿಮಾನ್ ದೀಪಕ್  ಅಂದುಞಿ ಗಮಿ, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ  ಮುಂತಾದವರು ಉಪಸ್ಥಿತರಿದ್ದರು.

ಖತೀಬ್ ಮಹಮ್ಮದ್ ಅಲಿ ಫೈಝಿ ದುವಾ ನೆರವೇರಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಸೀತಾಲಕ್ಷ್ಮಿ ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕ ಮಹಮ್ಮದ್ ರಫೀಕ್ ಹಾಗೂ ಸದರ್ ಉಮ್ಮರ್ ಸ‌ಅದಿ ಪ್ರಸ್ತಾವಿಸಿದರು. ವಿದ್ಯಾರ್ಥಿಗಳು ತಮ್ಮ ಶಾಲಾ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿ ತಫ್ಶೀರಾ ನಿರೂಪಿಸಿದರು.  ಅಶ್ರಿಫಾ ಸ್ವಾಗತಿದರು. ಸನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News