ಸಿಬಿಎಸ್‍ಇ ಪರೀಕ್ಷೆ : ಲೂಡ್ರ್ಸ್ ಸೆಂಟ್ರಲ್ ಶಾಲೆಗೆ ಶೇ. 100 ಫಲಿತಾಂಶ

Update: 2021-07-30 11:07 GMT

ಮಂಗಳೂರು : 2020-21 ನೇ ಸಾಲಿನಲ್ಲಿ ಸಿಬಿಎಸ್‍ಇ ಗೊಳಪಟ್ಟ 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಮಂಗಳೂರಿನ ಪ್ರತಿಷ್ಠಿತ ಲೂಡ್ರ್ಸ್ ಸೆಂಟ್ರಲ್ ಶಾಲೆ 100% ಫಲಿತಾಂಶ ಪಡೆದು ಅತ್ಯುತ್ತಮ ಸಾಧನೆ ಮಾಡಿದೆ.

ಈ ಫಲಿತಾಂಶವು ವಿದ್ಯಾರ್ಥಿಯ 10ನೇ ತರಗತಿ, 11ತರಗತಿ, ಹಾಗೂ 12ನೇ ತರಗತಿ ಯಲ್ಲಿನ ಶೈಕ್ಷಣಿಕ ಪ್ರಗತಿಯನ್ನು ಪರಿಗಣಿಸಿ ತಯಾರಿಸಲ್ಪಟ್ಟಿರುತ್ತದೆ.

ಶಾಲೆಯ ಒಟ್ಟು 63 ವಿದ್ಯಾರ್ಥಿಗಳಲ್ಲಿ 57 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣವಾಗಿ ಶ್ರೇಷ್ಠ ಸಾಧನೆ ಮಾಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ, ಸತ್ಯಾರ್ಥ್ ಸಿಂಗ್ 489 (97.8%,ಪಿ.ಸಿ.ಎ0.ಸಿ) ಅ0ಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದು, ಸಾಥ್ವಿಕ್ ಆಚಾರ್ಯ 485 (97%, ಪಿ.ಸಿ.ಎಮ್.ಸಿ) ಅಂಕಗಳೊ0ದಿಗೆ ದ್ವಿತೀಯ ಸ್ಥಾನ ಹಾಗೂ ಅನನ್ಯ ಎನ್ 484 (96.8%, ಪಿ.ಸಿ.ಎಮ್.ಬಿ) ತೃತೀಯ ಸ್ಥಾನ ಪಡೆದಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಪ್ರ್ರೇನೀತ್ ಕುಮಾರ್ ಜೈನ್ 466 (93.2%)  ಗರಿಷ್ಠ ಅಂಕ ಪಡೆದಿರುತ್ತಾರೆ ಎಂದು ಶಾಲಾ ಪ್ರಾಂಶುಪಾಲರಾದ ಫಾ | ರೋಬರ್ಟ್ ಡಿಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News