​ಬೈಕಂಪಾಡಿಯಲ್ಲಿ ಶಾಶ್ವತ ಮೀನು ಮಾರುಕಟ್ಟೆ ನಿರ್ಮಾಣ: ಶಾಸಕರಿಂದ ಸ್ಥಳ ಪರಿಶೀಲನೆ

Update: 2021-07-30 14:38 GMT

ಮಂಗಳೂರು, ಜು.30: ರಾ.ಹೆ.66ರ ಬೈಕಂಪಾಡಿಯಲ್ಲಿರುವ ಮೀನು ಮಾರುಕಟ್ಟೆ ಅಜೀರ್ಣಾವಸ್ಥೆಯಲ್ಲಿದ್ದು, ಅಲ್ಲಿ ಶಾಶ್ವತ ಮೀನು ಮಾರುಕಟ್ಟೆ ನಿರ್ಮಿಸುವುದಕ್ಕೆ ಸಂಬಂಧಿಸಿ ಶಾಸಕ ಡಾ.ಕೆ.ಭರತ್ ಶೆಟ್ಟಿ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.

ಈಗಿರುವ ಮಾರುಕಟ್ಟೆಯು ಅಜೀರ್ಣಾವಸ್ಥೆಯಲ್ಲಿದೆ. ಸುಸಜ್ಜಿತ ಕಟ್ಟಡ ನಿರ್ಮಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದು ಪಾಲಿಕೆ ನಾಮನಿರ್ದೇಶಿತ ಸದಸ್ಯ ರಾಜೇಶ್ ಸಾಲ್ಯಾನ್ ಮನವಿ ಮಾಡಿದರು.

ಅಲ್ಲದೆ ಮೀನುಗಾರರು ಕೂಡ ಮಾರುಕಟ್ಟೆ ನಿರ್ಮಿಸಲು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಮೀನು ಮತ್ತು ತರಕಾರಿ ಮಾರುಕಟ್ಟೆಯನ್ನು ವೀಕ್ಷಿಸಿದರು. ಎಪಿಎಂಸಿ ಜಾಗ ಇದಾಗಿರುವುದರಿಂದ ಪ್ರತ್ಯೇಕ ವ್ಯವಸ್ಥೆ ಅಥವಾ ಎಪಿಎಂಸಿಯಿಂದಲೇ ಮಾರುಕಟ್ಟೆ ನಿರ್ಮಿಸಿಕೊಡುವ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು.

ಕಾರ್ಪೊರೇಟರ್ ಸುಮಿತ್ರಾ ಕರಿಯ, ಬಿಜೆಪಿ ಮೀನುಗಾರಿಕಾ ಪ್ರಕೋಷ್ಟ ದ.ಕ. ಜಿಲ್ಲಾ ಸಂಚಾಲಕ ಗಿರೀಶ್ ಚಿತ್ರಾಪುರ, ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ನವೀನ್ ಶ್ರೀಯಾನ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News