ಆ.1: ಗುಡ್ಡೆಯಂಗಡಿಯಲ್ಲಿ ವೈಜ್ಞಾನಿಕ ಮಲ್ಲಿಗೆ ಮತ್ತು ಅಡಿಕೆ ಕೃಷಿ ಮಾಹಿತಿ

Update: 2021-07-30 13:28 GMT

ಉಡುಪಿ, ಜು.30: ಉಡುಪಿ ಜಿಲ್ಲಾ ಕೃಷಿಕ ಸಂಘದ ಹಿರಿಯಡ್ಕ ವಲಯ ಸಮಿತಿ ಆಯೋಜಿಸಿರುವ ವೈಜ್ಞಾನಿಕ ಅಡಿಕೆ ಮತ್ತು ಮಲ್ಲಿಗೆ ಕೃಷಿ ಮಾಹಿತಿ ಕಾರ್ಯಕ್ರಮ ಆ.1ರ ರವಿವಾರ ಅಪರಾಹ್ನ 3:00 ಗಂಟೆಗೆ ಹಿರಿಯಡ್ಕ ಗುಡ್ಡೆಯಂಗಡಿ ಪಾಲೇಮಾರ್ ರಸ್ತೆಯಲ್ಲಿರುವ ದಯಾನಂದ ಗಾಣಿಗರ ನಂದಾ ಫಾರ್ಮ್ ವಠಾರದಲ್ಲಿ ನಡೆಯಲಿದೆ.

ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷ ಮುಂಡುಜೆ ಸುರೇಶ್ ನಾಯಕ್ ಅಧ್ಯಕ್ಷತೆ ಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೃಷಿಕ ಸಂಘದ ಪದಾಧಿಕಾರಿಗಳಾದ ಶ್ರೀವಾಸ ಬಲ್ಲಾಳ್ ಮಲ್ಲಂಪಳ್ಳಿ, ದಿನೇಶ್ ಶೆಟ್ಟಿ ಹೆರ್ಗ, ಪಾಂಡುರಂಗ ನಾಯಕ್ ಹಿರಿಯಡ್ಕ, ರವೀಂದ್ರ ಗುಜ್ಜರಬೆಟ್ಟು ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಭಾಗವಸಲಿದ್ದಾರೆ.

ವೈಜ್ಞಾನಿಕ ಹಾಗೂ ಕಡಿಮೆ ಖರ್ಚಿನಲ್ಲಿ ಲಾಭದಾಯಕವಾಗಿ ಅಡಿಕೆ ಮತ್ತು ಮಲ್ಲಿಗೆ ಬೆಳೆಗಳ ಕೃಷಿ ಮಾಡುವ ಕ್ರಮಗಳು, ಅವುಗಳ ನಾಟಿ, ಕೀಟ-ರೋಗ ಬಾಧೆಗಳ ನಿರ್ವಹಣೆ ಕುರಿತ ಕಾರ್ಯಕ್ರಮದಲ್ಲಿ ಸಮಗ್ರ ಮಾಹಿತಿ ನೀಡಲಾಗುತ್ತದೆ ಎಂದು ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News