ಕಡಬ ಬ್ಲಾಕ್ ಕಾಂಗ್ರೆಸ್ ಸಂಯೋಜಕರಾಗಿ ಎನ್. ಜಯಪ್ರಕಾಶ್ ರೈ ನೇಮಕ
Update: 2021-07-30 19:55 IST
ಕಡಬ: ಕಡಬ ಬ್ಲಾಕ್ ಕಾಂಗ್ರೆಸ್ ಸಂಯೋಜಕರಾಗಿ ಸುಳ್ಯದ ಎನ್.ಜಯಪ್ರಕಾಶ್ ರೈ ನೇಮಕಗೊಂಡಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಜಿಲ್ಲೆಯ ವಿಧಾನ ಸಭಾ ಕ್ಷೇತ್ರದ 16 ಬ್ಲಾಕ್‍ಗಳಲ್ಲಿ ಪಕ್ಷ ಸಂಘಟನೆಯ ಬಗ್ಗೆ ನಾನಾ ಜವಾಬ್ದಾರಿಗಳನ್ನು ನೋಡಿಕೊಳ್ಳಲು ಜಿಲ್ಲಾ ಸಂಯೋಜಕರು, ಸಹ ಸಂಯೋಜಕರು, ಬ್ಲಾಕ್ ಸಂಯೋಜಕರನ್ನು ನೇಮಿಸಲಾಗಿದ್ದು, ಕಡಬಕ್ಕೆ ಎನ್.ಜಯಪ್ರಕಾಶ್ ರೈ ನೇಮಕಗೊಂಡಿದ್ದಾರೆ.
ಎನ್.ಜಯಪ್ರಕಾಶ್ ರೈಯವರು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದಾರೆ.