ದ.ಕ. ಜಿಲ್ಲೆಯಲ್ಲಿ ಲಕ್ಷ ದಾಟಿದ ಕೊರೋನ ಪ್ರಕರಣ; ಶುಕ್ರವಾರ 345 ಮಂದಿಗೆ ಸೋಂಕು ದೃಢ

Update: 2021-07-31 04:03 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜು.30: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯ ದೈನಂದಿನ ಸೋಂಕಿನ ಪ್ರಕರಣ ಮತ್ತೆ ತ್ರಿಶತಕದತ್ತ ಮರಳುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಒಂದು ಲಕ್ಷ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್‌ನಿಂದಾಗಿ ಏಳು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಹೊಸದಾಗಿ 345 ಸೋಂಕು ಪ್ರಕರಣಗಳು ಪತ್ತೆಯಾಗಿವೆ. 201 ಮಂದಿ ಗುಣಮುಖರಾಗಿದ್ದಾರೆ. 

ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,00,005 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 95,900 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ನಿಂದಾಗಿ ಜಿಲ್ಲೆಯಲ್ಲಿ ಒಟ್ಟು 1,417 ಮಂದಿ ಮೃತಪಟ್ಟಿದ್ದಾರೆ. ಸದ್ಯ 2,825 ಸಕ್ರಿಯ ಪ್ರಕರಣಗಳಿವೆ.

ಮಾಸ್ಕ್ ನಿಯಮ ಉಲ್ಲಂಘನೆಗಾಗಿ 82,384 ಮಂದಿಯಿಂದ 1,00,16,717 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.

11.68 ಲಕ್ಷ ಮಂದಿಗೆ ಕೋವಿಡ್ ಲಸಿಕೆ
ದ.ಕ. ಜಿಲ್ಲೆಯ ಕೋವಿಡ್-19 ಲಸಿಕಾ ಅಭಿಯಾನದಡಿ ಇಲ್ಲಿಯವರೆಗೆ 11,68,381 ಮಂದಿ ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ. ಇಲ್ಲಿಯವರೆಗೆ ಮೊದಲನೆಯ ಡೋಸ್ ಲಸಿಕೆ ಒಟ್ಟು 8,98,646 ಫಲಾನುಭವಿಗಳಿಗೆ ಹಾಗೂ ಎರಡನೇ ಡೋಸ್ ಲಸಿಕೆಯನ್ನು 2,69,735 ಮಂದಿಗೆ ನೀಡಲಾಗಿದೆ. ಲಸಿಕೆ ಪಡೆದವರಲ್ಲಿ 18ರಿಂದ 44 ವರ್ಷದ ವಯೋಮಾನದವರ ಗುರಿಯಲ್ಲಿ ಮೊದಲನೆಯ ಡೋಸ್ ಶೇ.32.46 ಹಾಗೂ ಎರಡನೇ ಡೋಸ್ ಶೇ.5.01 ನೀಡಲಾಗಿದೆ.

45 ವರ್ಷದಿಂದ 59 ವರ್ಷದೊಳಗಿನ ಫಲಾನುಭವಿಗಳ ಗುರಿಯಲ್ಲಿ ಪ್ರಥಮ ಡೋಸ್ ಶೇ.65.53 ಹಾಗೂ ಎರಡನೇ ಡೋಸ್ ಶೇ.38.65 ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರ ಗುರಿಯಲ್ಲಿ ಪ್ರಥಮ ಡೋಸ್ ಶೇ.92.83 ಹಾಗೂ ಎರಡನೇ ಡೋಸ್ ಶೇ.55.54 ನೀಡಲಾಗಿದೆ.

ಜಿಲ್ಲೆಯಲ್ಲಿ ಶುಕ್ರವಾರ 6,125 ಮಂದಿ ಲಸಿಕೆ ಪಡೆದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News