ಚೀನಾದಲ್ಲಿ ಹೊಸದಾಗಿ ಕೊರೋನ ಸ್ಫೋಟ; ಲಕ್ಷಾಂತರ ಮಂದಿಗೆ ಕ್ವಾರಂಟೈನ್‌

Update: 2021-07-30 16:47 GMT

ಬೀಜಿಂಗ್, ಜು. 30: ಚೀನಾದಲ್ಲಿ ಹೊಸದಾಗಿ ಕೊರೋನ ವೈರಸ್ ಸ್ಪೋಟ ಸಂಭವಿಸಿದ್ದು ಲಕ್ಷಾಂತರ ಮಂದಿ ಕ್ವಾರಂಟೈನ್‌ ನಲ್ಲಿದ್ದಾರೆ.

ಚೀನಾದಲ್ಲಿ ನಂಜಿಂಗ್ ನಗರದಲ್ಲಿ ಇತ್ತೀಚೆಗೆ ಹಲವು ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದವು. ಈ ತಿಂಗಳ ಆದಿ ಭಾಗದಲ್ಲಿ ರಶ್ಯದಿಂದ ಬಂದ ವಿಮಾನವೊಂದನ್ನು ಸ್ವಚ್ಛಮಾಡಿರುವ ವಿಮಾನ ನಿಲ್ದಾಣದ ಕೆಲಸಗಾರರಿಂದ ಈ ಸೋಂಕು ಹರಡಿದೆ ಎಂಬುದಾಗಿ ಭಾವಿಸಲಾಗಿದೆ. ಈ ಸೋಂಕು ಶುಕ್ರವಾರದ ವೇಳೆಗೆ ರಾಜಧಾನಿ ಬೀಜಿಂಗ್ ಮತ್ತು ಐದು ರಾಜ್ಯಗಳಿಗೆ ಹರಡಿದೆ.

ಶುಕ್ರವಾರದ ವೇಳೆಗೆ, ನಂಜಿಂಗ್ ರಾಜಧಾನಿಯಾಗಿರುವ ಜಿಯಂಗ್ಸು ಪ್ರಾಂತದಲ್ಲಿ ಲಕ್ಷಾಂತರ ಜನರನ್ನು ಕ್ವಾರಂಟೈನ್‌ ಗೆ ಒಳಪಡಿಸಲಾಗಿದೆ. ಅದೇ ವೇಳೆ, ಬೀಜಿಂಗ್ ನ ಚಂಗ್ಪಿಂಗ್ ಜಿಲ್ಲೆಯಲ್ಲಿ ಸುಮಾರು 41,000 ಮಂದಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News