ಸಿಎಂ ಬದಲಾವಣೆಯಿಂದ ಬಿಜೆಪಿಯ ನೀತಿ ಬದಲಾವಣೆ ಆಗಲ್ಲ: ಸಿಪಿಎಂ
Update: 2021-07-30 22:25 IST
ಉಡುಪಿ, ಜು.30: ನೂತನ ಮುಖ್ಯಮಂತ್ರಿಯಾಗಿ ಬೊಮ್ಮಾಯಿಯವರನ್ನು ನೇಮಕ ಮಾಡಲಾಗಿದ್ದು, ಮುಖ್ಯಮಂತ್ರಿ ಬದಲಾವಣೆಯಿಂದ ಬಿಜೆಪಿಯ ಆಡಳಿತ ನೀತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಕಾರ್ಪೊರೇಟ್ ಪರ ನೀತಿಗಳು, ಬೆಲೆ ಏರಿಕೆ, ಜನರ ಸಂಕಷ್ಟಗಳು ಮುಂದುವರಿಯಲಿವೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಟೀಕಿಸಿದೆ.
ಸರಕಾರದಲ್ಲಿ ನೇತಾ ಬದಲಾವಣೆಯಲ್ಲ, ನೀತಿ ಜನರ ಪರವಾಗಿ ಬದಲಾಗಬೇಕು. ಬದಲಾದ ಮುಖ್ಯಮಂತ್ರಿಗಳು ಬಿಜೆಪಿಯ ನೀತಿಗೆ ಭಿನ್ನವಾಗಿರುವ ಸಾಧ್ಯತೆ ಖಂಡಿತಾ ಇಲ್ಲ. ರಾಜ್ಯದ ಜನತೆ ತನ್ನ ಸಂಕಷ್ಢ ಹಾಗೂ ಬದುಕುವ ಹಕ್ಕನ್ನು ಮತ್ತು ಪ್ರಜಾ ಸತ್ತೆಯನ್ನು ಉಳಿಸಿಕೊಳ್ಳಲು ಚಳುವಳಿಯನ್ನು ಮುನ್ನಡೆಸಬೇಕು ಎಂದು ಸಿಪಿಐಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.