ಈ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆ

Update: 2021-08-01 04:14 GMT
ಸಾಂದರ್ಭಿಕ ಚಿತ್ರ

ಚಂಡೀಗಢ: ಪ್ರತಿ ಯುನಿಟ್ ವಿದ್ಯುತ್ ದರದಲ್ಲಿ 37 ಪೈಸೆ ಇಳಿಕೆ ಮಾಡುವ ನಿರ್ಧಾರವನ್ನು ಹರ್ಯಾಣ ಸರ್ಕಾರ ಕೈಗೊಂಡಿದೆ. ರಾಜ್ಯದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ವಿದ್ಯುತ್ ಗ್ರಾಹಕರು ತಿಂಗಳಿಗೆ ಸುಮಾರು 100 ಕೋಟಿ ರೂಪಾಯಿ ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ಹೇಳಿದರು.

ಹಿಂದಿನ ವರ್ಷಗಳಿಗೆ ಹೋಲಿಸಿದರೆ 2020-21ರಲ್ಲಿ ವಿದ್ಯುತ್ ಸರಬರಾಜು ಕಂಪನಿಗಳ ವಿದ್ಯುತ್ ಖರೀದಿ ದರ ಯೂನಿಟ್‌ಗೆ 36 ಪೈಸೆಯಷ್ಟು ಕಡಿಮೆಯಾಗಿದೆ. ಉತ್ತಮ ಯೋಜನೆ ಮತ್ತು ಶೆಡ್ಯೂಲಿಂಗ್‌ ನಿಂದಾಗಿ ಇದನ್ನು ಸಾಧಿಸುವುದು ಸಾಧ್ಯವಾಗಿದೆ ಎಂದು ಖಟ್ಟರ್ ವಿವರಿಸಿದರು. ರಾಜ್ಯದ ವಿದ್ಯುತ್ ನಿಯಂತ್ರಣ ಸಂಸ್ಥೆ ನಡೆಸುವ ಎಫ್‌ಎಸ್‌ಎ (ಫ್ಯೂಯೆಲ್ ಸರ್ಚಾರ್ಜ್ ಅಡ್ಜೆಸ್ಟ್‌ಮೆಂಟ್)ನಲ್ಲೂ ಇದು ಪ್ರತಿಬಿಂಬಿತವಾಗಿದೆ" ಎಂದರು.

ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಈ ನಿರ್ಧಾರವನ್ನು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ. ಪ್ರತಿ ಯೂನಿಟ್‌ಗೆ 37 ಪೈಸೆ ಇಳಿಸಲಾಗುತ್ತಿದೆ ಎಂದು ಅಧಿಕೃತ ವಕ್ತಾರರು ಹೇಳಿದ್ದಾರೆ.

ಕೃಷಿಕರ ಎಫ್‌ಎಸ್‌ಎ ಹೊರೆಯನ್ನು ಈಗಾಗಲೇ ಸರ್ಕಾರ ಭರಿಸುತ್ತಿದೆ. ರಾಜ್ಯದಲ್ಲಿ ಕೈಗೆಟುಕುವ ದರದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸಲು ಸರ್ಕಾರ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News