ಪುತ್ತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ನೂತನ ಪದಾಧಿಕಾರಿಗಳ ಆಯ್ಕೆ

Update: 2021-08-01 11:30 GMT

ಪುತ್ತೂರು : ಪುತ್ತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್  ಇದರ ವಾರ್ಷಿಕ ಮಹಾ ಸಭೆಯು ಪುತ್ತೂರು ಕೇಂದ್ರ ಮದ್ರಸದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಫತ್ತಿಷ್ ಅಬ್ದುಲ್ ಹಮೀದ್ ದಾರಿಮಿ ಅವರು, ಪ್ರಸಕ್ತ ವರ್ಷದ ಶೈಕ್ಷಣಿಕ ಕಾರ್ಯಚಟುವಟಿಕೆ ಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಸ್ಥಳೀಯ ಮಸೀದಿಯ ಖತೀಬ್ ಪುತ್ತಿಗೆ ಅಬ್ಬಾಸ್ ಫೈಝಿ ಅವರು ಉದ್ಘಾಟಿಸಿ, 'ಸಮಸ್ತ' ವಿದ್ಯಾಭ್ಯಾಸ ಬೋರ್ಡ್ ನ್ನು ಕಟ್ಟಿ ಬೆಳೆಸಿದ ಉಲಮಾ, ಉಮರಾ ನಾಯಕರನ್ನು ಸ್ಮರಿಸಿದರು.

ದ.ಕ.ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಮುಖ್ಯ ಭಾಷಣ ನಡೆಸಿದರು. ರೇಂಜ್ ಮದ್ರಸ ಮ್ಯಾನೆಜ್‌ಮೆಂಟ್‌ ಅಧ್ಯಕ್ಷರೂ 'ಸಮಸ್ತ' ವಿದ್ಯಾಭ್ಯಾಸ ಬೋರ್ಡ್ ಸದಸ್ಯರೂ ಆದ ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ, ರೇಂಜ್ ಕೋಶಾಧಿಕಾರಿ ಎಲ್.ಟಿ. ಅಬ್ದುರ್ರಝಾಕ್ ಹಾಜಿ ಪುತ್ತೂರು, ರೇಂಜ್ ಮ್ಯಾನೆಜ್‌ಮೆಂಟ್‌ ಪ್ರಧಾನ ಕಾರ್ಯದರ್ಶಿ ಹಮೀದ್ ಖಂದಕ್, ಆರ್.ಪಿ. ಅಬ್ದುರ್ರಝಾಕ್ ಪಡೀಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೇಂಜ್ ಪ್ರಧಾನ ಕಾರ್ಯದರ್ಶಿ ಹನೀಫ್ ದಾರಿಮಿ ಸ್ವಾಗತಿಸಿ ,ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸಮಾರಂಭದಲ್ಲಿ 2021-22ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಈ ಕೆಳಗಿನವನ್ನು ಆರಿಸಲಾಯಿತು.

ಅಧ್ಯಕ್ಷರು :ಅಬ್ದುಲ್ ಕರೀಂ ದಾರಿಮಿ ಬೊಳ್ವಾರ್, ಉಪಾಧ್ಯಕ್ಷರು : ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಮತ್ತು ಬಶೀರ್ ದಾರಿಮಿ ಸಾಲ್ಮರ, ಪ್ರಧಾನ ಕಾರ್ಯದರ್ಶಿ: ಹನೀಫ್ ದಾರಿಮಿ ಪಡೀಲ್, ಜೊತೆ ಕಾರ್ಯದರ್ಶಿ: ಸ್ವಾಲಿಹ್ ಕೌಸರಿ ವಳತ್ತಡ್ಕ ಮತ್ತು ಸುಲೈಮಾನ್ ದಾರಿಮಿ ಮಂಜ, ಕೋಶಾಧಿಕಾರಿ : ಎಲ್ ಟಿ ರಝಾಕ್ ಹಾಜಿ ಪುತ್ತೂರು, ಪರೀಕ್ಷಾ ಬೋರ್ಡ್ ಚೇರ್ಮನ್ : ಶಾಫಿ ಮುಸ್ಲಿಯಾರ್ ಕಲ್ಲೆಗ, ವೈಸ್ ಚೇರ್ಮನ್ : ಖಾಸಿಂ ಯಮಾನಿ ಅಬೂಸ್ವಾಲಿಹ್ ಕೌಸರಿ, ಐ.ಟಿ.ಕೋಡಿನೇಟರ್ : ಮುಸ್ತಫ ಫೈಝಿ ಪರ್ಲಡ್ಕ, ಎಸ್ಕೆ ಎಸ್.ಬಿ.ವಿ. ಚೇರ್ಮನ್ , ಅಬ್ದುರ್ರಶೀದ್ ದಾರಿಮಿ ಬಲ್ನಾಡ್, ಕನ್ವೀನರ್ : ದಾವೂದ್ ಫೈಝಿ ಬೀಟಿಗೆ, ರಿಲೀಫ್ ಫಂಡ್ ಚೇರ್ಮನ್ : ಅಬ್ದುಲ್ ಹಮೀದ್ ಹನೀಫಿ ದರ್ಬೆ, ಕನ್ವೀನರ್ : ಅನ್ವರ್ ಮುಸ್ಲಿಯಾರ್ ಸಾಲ್ಮರ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News