ಗೋಳ್ತಮಜಲು : ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ವತಿಯಿಂದ ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮ

Update: 2021-08-01 15:56 GMT

ವಿಟ್ಲ : ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ವತಿಯಿಂದ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮವು ಗೋಳ್ತಮಜಲು ಹಜಾಜ್ ಸ್ಪೋರ್ಟ್ಸ್ ಕ್ಲಬ್ ಕಚೇರಿಯಲ್ಲಿ ರವಿವಾರ ನಡೆಯಿತು.

ಹಜಾಜ್ ಸ್ಪೋರ್ಟ್ಸ್ ಕ್ಲಬ್ ಗೋಳ್ತಮಜಲ್, ವಿಟ್ಲ ವ್ಯವಸಾಯ ಸಹಕಾರಿ ಸೇವಾ ಸಂಘ, ಟಿಕ್ಕ ಪೋಯಿಂಟ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಕಲ್ಲಡ್ಕ, ಝಿಗ್ ಝ್ಯಾಗ್ ನಿಟಿಲಾಪುರ ಮತ್ತು ಸಮೃದ್ಧಿ ಟೆಕ್ಸ್ ಟೈಲ್ ವಿಟ್ಲ ಇವರ ಸಹಯೋಗದೊಂದಿಗೆ ಎ.ಜೆ.ಆಸ್ಪತ್ರೆ ಮಂಗಳೂರು ಇವರ ಸಹಕಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ  ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಖತೀಬ್ ಶೇಕ್ ಮಹಮ್ಮದ್ ಇರ್ಫಾನಿ ಅವರು ಮಾತನಾಡಿ ರಕ್ತವು ಮನುಷ್ಯನ ಶರೀರದಿಂದ ಮಾತ್ರ ಉತ್ಪತ್ತಿಯಾಗುವ ಅತ್ಯಮೂಲ್ಯ ವಸ್ತುವಾಗಿದ್ದು ಇಂತಹ ರಕ್ತದಾನವು ಅತ್ಯಂತ ಶ್ರೇಷ್ಠದಾನ ಹಾಗೂ ಇತರರ ಪ್ರಾಣ ಕಾಪಾಡುವಂತಹ  ಪುಣ್ಯದ ಕೆಲಸವಾಗಿದೆ ಎಂದರು.

ಹಜಾಜ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಮಹಮ್ಮದ್ ಹನೀಪ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಅಧ್ಯಕ್ಷ ನಝೀರ್ ಹುಸೈನ್, ಉದ್ಯಮಿ ಅಹ್ಮದ್ ಮುಸ್ತಾಫ ಗೋಳ್ತಮಜಲು,  ಎಂ ಫೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ನ್ಯಾಯವಾದಿ, ನೋಟರಿ ಅಬೂಬಕ್ಕರ್ ವಿಟ್ಲ, ಸಾಮಾಜಿಕ ಕಾರ್ಯಕರ್ತ ಶಾಕಿರ್ ಅಳಕೆ ಮಜಲ್, ಪತ್ರಕರ್ತ  ಲತೀಪ್ ನೇರಳಕಟ್ಟೆ ಮಾತನಾಡಿ ಶುಭ ಹಾರೈಸಿದರು.

ಹಜಾಜ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ  ಇಮ್ತಿಯಾಝ್, ಝಿಗ್ ಝ್ಯಾಗ್  ನಿಟಿಲಾಪುರ ಇದರ ಅಧ್ಯಕ್ಷ ರಮೇಶ್ ಪೂಜಾರಿ , ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಜಗದೀಶ್ ವಿಟ್ಲ, ಮಹಮ್ಮದ್ ಅಶ್ರಫ್ ಟಿಕ್ಕಾ ಪೊಯಿಂಟ್ ಕಲ್ಲಡ್ಕ, ಶಿಹಾಬುದ್ದೀನ್ ಗೋಳ್ತಮಜಲ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಎ.ಜೆ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ವ್ಯವಸ್ಥಾಪಕ ಪಿ.ಅರ್. ಗೋಪಾಲಕೃಷ್ಣ , ಸಮಾಜ ಸೇವಕಿ  ಸಮ್ರೀನ ತೊಕ್ಕೊಟ್ಟು,  60 ಬಾರಿ ರಕ್ತದಾನ ಮಾಡಿದ ಪ್ರವೀಣ್ ಜೈನ್ ಬೆಳುವಾಯಿ, ಹಿರಿಯ ಕಬಡ್ಡಿ ಆಟಗಾರಾದ ಅಬ್ದುಲ್ ಜಬ್ಬಾರ್, ಮಹಮ್ಮದ್ ಶರೀಫ್ ಗೋಳ್ತಮಜಲು, ದೇಹದಾಡ್ಯ ಪಟು ಪಿ ಎಮ್ ಇಲ್ಯಾಸ್ ಅವರನ್ನು ಸನ್ಮಾನಿಸಲಾಯಿತು.

ಬ್ಲಡ್ ಹೆಲ್ಪ್ ‌ಕೇರ್ ಕಾರ್ಯದರ್ಶಿ ಸಫ್ವಾನ್ ಕಲಾಯಿ ಸ್ವಾಗತಿಸಿ, ಕೋಶಾಧಿಕಾರಿ ಅಬ್ದುಲ್ ಸತ್ತಾರ್ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News