ವೈಜ್ಞಾನಿಕ ಕೃಷಿಯಲ್ಲಿ ಶೇ.25 ಖರ್ಚು, ಶೇ.75 ಲಾಭ: ರಾಮಕೃಷ್ಣ ಶರ್ಮಾ

Update: 2021-08-01 14:14 GMT

ಶಿರ್ವ, ಆ.1: ರೈತರು ತಮ್ಮ ಕೃಷಿ ಪದ್ಧತಿಯನ್ನು ಬದಲಾಯಿಸಬೇಕಾಗಿದೆ. ತಪ್ಪುಗಳಿಲ್ಲದ ಆಧುನಿಕ ಕೃಷಿ ಪದ್ಧತಿಯಿಂದ ಅಧಿಕ ಲಾಭಗಳಿ ಸಬಹುದಾಗಿದೆ. ವೈಜ್ಞಾನಿಕ ಕೃಷಿಯಲ್ಲಿ 25 ಪಾಲು ಖರ್ಚು 75 ಪಾಲು ಲಾಭ ಬರುತ್ತದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ, ಪ್ರಗತಿಪರ ಕೃಷಿಕ ಬಂಟಕಲ್ಲು ರಾಮಕೃಷ್ಣ ಶರ್ಮಾ ತಿಳಿಸಿದ್ದಾರೆ.

ಶಿರ್ವ ಆರ್ಗ್ಯಾನಿಕ್ ಕೃಷಿಕರ ಸಂಘದ ವತಿಯಿಂದ ರಾಂಜೆಸ್ ಗಾರ್ಡನ್ ಶಿರ್ವಕೋಡು ಎಂಬಲ್ಲಿ ಶುಕ್ರವಾರ ಜರಗಿದ ವೈಜ್ಞಾನಿಕ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಸರಕಾರದಿಂದ ರೈತರಿಗೆ ನೂರಾರು ಸೌಲಭ್ಯಗಳು ಸಿಗುತ್ತಿವೆ. ಆದರೆ ರೈತರು ಕೃಷಿಯಲ್ಲಿ ವೈಜ್ಞಾನಿಕ ಕ್ರಮ ಅಳವಡಿಸುತ್ತಿಲ್ಲ. ಅದಕ್ಕಾಗಿಯೇ ಜಿಲ್ಲಾ ಕೃಷಿಕ ಸಂಘ ಜಿಲ್ಲೆಯಾದ್ಯಂತ ಕೃಷಿಕರ ಮನೆಬಾಗಿಲಿಗೆ ಬಂದು ಉಚಿತವಾಗಿ ಈ ಮಾಹಿತಿ ನೀಡುವತ್ತ ಸಕ್ರೀಯವಾಗಿದೆ ಎಂದರು.

ಕಾರ್ಯಕ್ರಮವನ್ನು ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್ ಉದ್ಘಾಟಿಸಿ ದರು. ಅಧ್ಯಕ್ಷತೆಯನ್ನು ಆರ್ಗ್ಯಾನಿಕ್ ಕೃಷಿಕರ ಸಂಘದ ಅಧ್ಯಕ್ಷ ಆ್ಯಂಡ್ರೂ ಮೋನಿಸ್ ವಹಿಸಿದ್ದರು. ರೊನಾಲ್ಡ್ ಡಿಸೋಜ, ಮೈಕಲ್ ಡಿಸೋಜ, ರೂಸಿ ಡಿಸೋಜ ಪರಿಚಯಿಸಿದರು. ರಿಚಾರ್ಡ್, ಡಯಾನಾ, ಲಿಂಡಾ, ವಲೇರಿಯನ್ ಸಹಕರಿಸಿದರು. ನಿವೃತ್ತ ಶಿಕ್ಷಕ ಜೋಸೆಪ್ ಪೀಟರ್ ನಜ್ರೆತ್ ನಿರೂಪಿಸಿದರು. ಲೊರಿಟಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News