ದ.ಕ. ಜಿಲ್ಲೆ : ರಾಜ್ಯದಲ್ಲೇ ಅತಿಹೆಚ್ಚು 410 ಕೊರೋನ ಪಾಸಿಟಿವ್; ಕೋವಿಡ್ ಗೆ 6 ಬಲಿ

Update: 2021-08-01 16:34 GMT

ಮಂಗಳೂರು, ಆ.1: ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದು, ಇದು ದ.ಕ. ಜಿಲ್ಲೆಯ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಜಿಲ್ಲೆ ಅನ್‌ಲಾಕ್ ಆದ ಸಂದರ್ಭ 200ರ ಗಡಿಯಲ್ಲಿದ್ದ ಕೋವಿಡ್ ಪ್ರಕರಣಗಳು ಈಗ 400ರ ಗಡಿ ದಾಟಿವೆ. ಈ ಮೂಲಕ ರಾಜ್ಯದ ದಿನವಹಿ ಕೋವಿಡ್ ಪಟ್ಟಿಯಲ್ಲಿ ದ.ಕ. ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಅತಿಹೆಚ್ಚು ಕೇಸುಗಳು ದಾಖಲಾಗಿವೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕು ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ. ರಾಜ್ಯದಲ್ಲಿ ರವಿವಾರ ಪತ್ತೆಯಾದ ಕೇಸುಗಳ ಪಟ್ಟಿಯಲ್ಲಿ ದ.ಕ. ಜಿಲ್ಲೆಯಲ್ಲಿ ಅತಿಹೆಚ್ಚು (410) ಪಾಸಿಟಿವ್ ಪ್ರಕರಣ ವರದಿಯಾಗಿವೆ. ಬೆಂಗಳೂರು ನಗರ-409, ಉಡುಪಿ-163 ಮತ್ತು ಮೈಸೂರಿನಲ್ಲಿ 166 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

410 ಕೊನೋನ ಪಾಸಿಟಿವ್; 6 ಸಾವು: ದ.ಕ. ಜಿಲ್ಲೆಯಲ್ಲಿ ರವಿವಾರ 410 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಇದೇ ವೇಳೆ 6 ಮಂದಿ ಸಾವನ್ನಪ್ಪಿದ್ದು, 264 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,943 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಇದುವರೆಗೆ 1,00,780 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 1,430 ಮಂದಿ ಸಾವನ್ನಪ್ಪಿದ್ದಾರೆ. 96,407 ಮಂದಿ ಗುಣಮುಖ ರಾಗಿದ್ದಾರೆ. ಒಟ್ಟು 82,634 ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣ ದಾಖಲಾಗಿದ್ದು, 1,00,42,417 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News