ಮಲ್ಪೆ ಬೀಚ್‌ನಲ್ಲಿ ಮೈಸೂರಿನ ಯುವತಿ ಸಮುದ್ರಪಾಲು, ಮೂವರ ರಕ್ಷಣೆ

Update: 2021-08-01 15:50 GMT
ದೇಚಮ್ಮ

ಮಲ್ಪೆ, ಆ.1: ಮಲ್ಪೆ ಬೀಚ್‌ನಲ್ಲಿ ಆಡುತ್ತಿದ್ದ ನಾಲ್ವರ ಪೈಕಿ ಓರ್ವ ಯುವತಿ ಸಮುದ್ರ ಪಾಲಾಗಿದ್ದು, ಮೂವರನ್ನು ಸ್ಥಳೀಯರು ರಕ್ಷಿಸಿದ ಘಟನೆ ರವಿವಾರ ನಡೆದಿದೆ.

ಕೊಡಗು ಮೂಲದ ಮೈಸೂರು ನಿವಾಸಿ ದೇಚಮ್ಮ ಯು.ಜೆ.(20) ನಾಪತ್ತೆಯಾಗಿರುವ ಯುವತಿ. ಈಕೆಯ ಜೊತೆ ಇದ್ದ ಸ್ನೆಹಿತರಾದ ಮೈಸೂರು ವಿಜಯಪುರದ ಎಂ.ಯು.ಶೈನಿ(20), ನವ್ಯ ಮಂದಣ್ಣ (20), ನಿಖಿಲ್ ಗೌಡ (20) ಎಂಬವರನ್ನು ರಕ್ಷಿಸಲಾಗಿದೆ. ಇವರಲ್ಲಿ ತೀವ್ರ ಅಸ್ವಸ್ಥಗೊಂಡ ನಿಖಿಲ್ ಗೌಡ ಉಡುಪಿ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದಾರೆ.

ಇವರು ಜು.30ರಂದು ತಮ್ಮ ವಾಹನದಲ್ಲಿ ಪ್ರವಾಸ ಹೊರಟು ಮಂಗಳೂರಿಗೆ ಬಂದಿದ್ದು ಮಂಗಳೂರಿನಿಂದ ಜು.31ರಂದು ಮಧ್ಯಾಹ್ನ ಮಲ್ಪೆ ಬೀಚ್ಗೆ ಆಗಮಿಸಿ, ಇಲ್ಲಿನ ಬ್ಲೂಬೆ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ಇವರೆಲ್ಲರು ಸೇರಿ ಮಲ್ಪೆಬೀಚ್ ಸಮುದ್ರದಲ್ಲಿ ಆಟವಾಡು ತ್ತಿದ್ದು ಈ ವೇಳೆ ಸಮುದ್ರದ ನೀರಿನಲ್ಲಿ ತೆರೆಯ ಅಬ್ಬರಕ್ಕೆ ಈ ನಾಲ್ವರು ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋದರು ಎನ್ನಲಾಗಿದೆ.

ಆ ಸಮಯ ಸ್ಥಳದಲ್ಲಿದ್ದ ತಮಿಳುನಾಡು ದೋಣಿಯ ಅನಿಲ್ ಹಾಗೂ ಇತರರು ಸೇರಿ ಮೂವರನ್ನು ರಕ್ಷಿಸಿ ದಡಕ್ಕೆ ಕರೆತಂದರು. ಆ ಪೈಕಿ ದೇಚಮ್ಮ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದರು. ಇವರಿಗಾಗಿ ಹುಡುಕಾಟ ನಡೆಸಲಾಗಿದ್ದು, ಈವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News