×
Ad

ನ್ಯೂಝಿಲ್ಯಾಂಡ್: 70ರ ದಶಕದಲ್ಲಿ ಪೆಸಿಫಿಕ್ ವಲಸಿಗರ ಮೇಲೆ ದೌರ್ಜನ್ಯ: ಕ್ಷಮೆ ಕೋರಿದ ಪ್ರಧಾನಿ ಜೆಸಿಂಡಾ

Update: 2021-08-01 22:01 IST
photo :twitter/@jacindaardern

ಆಡಿಲೇಡ್,ಆ.1: ನ್ಯೂಝಿಲ್ಯಾಂಡ್ನಲ್ಲಿ 1970ರ ದಶಕದಲ್ಲಿ ಪೆಸಿಫಿಕ್ ದ್ವೀಪರಾಷ್ಟ್ರಗಳಿಂದ ವಲಸೆ ಬಂದಿದ್ದ ಜನರನ್ನು ಗುರಿಯಿರಿಸಿ ಪೊಲೀಸರು ನಡೆಸುತ್ತಿದ್ದ ದಾಳಿಗಳಿಗಾಗಿ ಪ್ರಧಾನಿ ಜೆಸಿಂಡಾ ಆರ್ಡರ್ನ್ ಕ್ಷಮೆಯಾಚಿಸಿದ್ದಾರೆ.

ಆಕ್ಲಂಡ್ ನಗರದ ಪುರಭವನದಲ್ಲಿ ರವಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆರ್ಡರ್ನ್ ಅವರು 1970ರ ವಲಸಿಗ ಕಾನೂನನ್ನು ದಶಕದಲ್ಲಿ ತಾರತಮ್ಯಭರಿತವಾಗಿ ಜಾರಿಗೊಳಿಸಿದ್ದಕ್ಕಾಗಿ ನ್ಯೂಝಿಲ್ಯಾಂಡ್ ಸರಕಾರದ ಪರವಾಗಿ ನಾನು ಪೆಸಿಫಿಕ್ ಮೂಲದ ಸಮುದಾಯಗಳಿಂದ ವಿದ್ಯುಕ್ತವಾದ ಹಾಗೂ ನಿಶ್ಯರ್ತವಾದ ಕ್ಷಮೆಯನ್ನು ಕೋರುತ್ತೇನೆ ಎಂದು ಹೇಳಿದರು.

1970ರ ದಶಕದಲ್ಲಿ ನಸುಕಿನ ದಾಳಿಯೆಂದೇ ಕುಖ್ಯಾತಿ ಪಡೆದ ಕಾರ್ಯಾಚರಣೆಯಲ್ಲಿ ಪೊಲೀಸರು, ಶ್ವಾನಗಳೊಂದಿಗೆ ಅವಧಿಮೀರಿ ದೇಶದಲ್ಲಿ ವಾಸವಾಗಿದ್ದ ಪೆಸಿಫಿಕ್ ವಲಸಿಗರ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದರು ಹಾಗೂ ಅವರನ್ನು ಶಿಕ್ಷೆಗೊಳಪಡಿಸಿದ ಆನಂತರ, ಗಡಿಪಾರು ಮಾಡಲಾಗುತ್ತಿತ್ತು.

ಆ ಕಾಲದಲ್ಲಿ ಸಮೋವಾ, ಟೊಂಗಾ ಹಾಗೂ ಫಿಜಿ ಸಹಿತ ದ್ವೀಪರಾಷ್ಟ್ರಗಳಿಂದ ಹಲವಾರು ಮಂದಿ ತಾತ್ಕಾಲಿಕ ವೀಸಾ ಮೂಲಕ ನ್ಯೂಝಿಲ್ಯಾಂಡ್ಗೆ ಆಗಮಿಸುತ್ತಿದ್ದರು. ದೇಶದ ಕಾರ್ಖಾನೆಗಳು ಹಾಗೂ ಗದ್ದೆಗಳಲ್ಲಿ ಕಾರ್ಮಿಕರ ಕೊರತೆಯನ್ನು ಅವರು ನೀಗುತ್ತಿದ್ದರು.

ಆದರೆ ನ್ಯೂಝಿಲ್ಯಾಂಡ್ ಪ್ರಜೆಗಳ ಉದ್ಯೋಗಗಳನ್ನು ವಲಸಿಗರು ಕಸಿಯತೊಡಗಿದ್ದಾರೆಂದು ಆಕ್ಷೇಪಗಳು ಬಲವಾಗಿ ಕೇಳಿಬರತೊಡಗು ತ್ತಿದ್ದಂತೆಯೇ,70ರ ದಶಕದ ವೇಳೆ ಸರಕಾರವು ಪೆಸಿಫಿಕ್ ದ್ವೀಪ ಸಮುದಾಯಗಳ ಜನರನ್ನು ಹೊರದಬ್ಬತೊಡಗಿತು. ಚಹರೆಯಲ್ಲಿ ನ್ಯೂಝಿಲ್ಯಾಂಡಿಗರ ಹಾಗೆ ಕಾಣಿಸದೆ ಇರುವ ವ್ಯಕ್ತಿಗಳು ತಾವು ಅಕ್ರಮ ವಲಸಿಗರು ಅಥವಾ ಅವಧಿ ಮೀರಿ ನೆಲೆಸಿರುವವರಲ್ಲವೆಂಬುದನ್ನು ಸಾಬೀತುಪಡಿಸಲು ಗುರುತುಚೀಟಿಗಳನ್ನು ಒಯ್ಯಬೇಕಾಗಿತ್ತು. ಅಲ್ಲದೆ ಅವರನ್ನು ಆಗಾಗ್ಗೆ ರಸ್ತೆ, ಶಾಲೆಗಳು ಹಾಗೂ ಚರ್ಚ್ ಗಳಲ್ಲಿ ಹಿಡಿದು ನಿಲ್ಲಿಸಿ, ವಿಚಾರಣೆಗೊಳಪಡಿಸಲಾಗುತ್ತಿತ್ತು.

ನ್ಯೂಝಿಲ್ಯಾಂಡ್ನಲ್ಲಿ ಅವಧಿ ಮೀರಿ ವಾಸವಾಗಿರುವವರಲ್ಲಿ ವಿಚಾರಣೆಯೆದುರಿಸುತ್ತಿರುವ ಶೇ.86 ಮಂದಿ ಪೆಸಿಫಿಕ್ ದ್ವೀಪಗಳ ಜನರಾಗಿದ್ದರೆ, ಬ್ರಿಟನ್ ಹಾಗೂ ಅಮೆರಿಕ ಮೂಲದವರು ಕೇವಲ ಶೇ.8ರಷ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News