×
Ad

ಪುತ್ತೂರು ಜಮೀಯತುಲ್ ಫಲಾಹ್ ಅಧ್ಯಕ್ಷರಾಗಿ ನ್ಯಾಯವಾದಿ ಫಸ್ಲುಲ್ ರಹೀಂ

Update: 2021-08-01 22:46 IST
ಫಜ್ಲುಲ್ ರಹೀಂ, ಅಶ್ರಫ್ ಕೊಟ್ಯಾಡಿ

ಪುತ್ತೂರು : ಜಮೀಯತುಲ್ ಫಲಾಹ್ ಪುತ್ತೂರು ಘಟಕದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಫಝ್ಲುಲ್ ರಹೀಂ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಕೊಟ್ಯಾಡಿ ಹಾಗೂ ಖಜಾಂಜಿಯಾಗಿ ಉಮ್ಮರ್ ಕರಾವಳಿ ಆಯ್ಕೆಯಾಗಿದ್ದಾರೆ.

ಜಮೀಯತುಲ್ ಫಲಾಹ್ ಪುತ್ತೂರು ಘಟಕದ ಮಹಾಸಭೆಯು ಇತ್ತೀಚೆಗೆ ಕಚೇರಿಯಲ್ಲಿ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾ ಯಿತು. ಉಪಾಧ್ಯಕ್ಷರಾಗಿ ರಶೀದ್ ಪರ್ಲಡ್ಕ ಮತ್ತು ಶರೀಫ್ ಮುಕ್ರಂಪಾಡಿ, ಜೊತೆ ಕಾರ್ಯದರ್ಶಿಯಾಗಿ ಇಬ್ರಾಹಿಂ ಹಾಜಿ ಸಾಗರ್, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ದರ್ಬೆ, ಪತ್ರಿಕಾ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಸೋಂಪಾಡಿ ಆಯ್ಕೆಗೊಂಡರು.

ಜಮೀಯತುಲ್ ಫಲಾಹ್ ಜಿಲ್ಲಾ ಸಮಿತಿಯಿಂದ ವೀಕ್ಷಕರಾಗಿ ಎನ್‍ಆರ್‍ಸಿಸಿ ಘಟಕದ ಪ್ರತಿನಿಧಿ ಫರ್ವೇಝ್ ಅಲಿ ಮತ್ತು ಜಿಲ್ಲಾ ಸಮಿತಿ ಕೋಶಾಧಿಕಾರಿ ಎಸ್.ಎಂ. ಬಶೀರ್ ಭಾಗವಹಿಸಿದ್ದರು. ನ್ಯಾಯವಾದಿ ಕೆ.ಎಂ. ಸಿದ್ದೀಕ್ ಕಾರ್ಯಕ್ರಮ ನಿರ್ವಹಿಸಿದರು. 

ಫೋಟೋ:

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News