×
Ad

ಮಿತ್ತಬೈಲ್ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾಗಿ ಮುಹಮ್ಮದ್ ಹನೀಫ್ ಹಾಜಿ ಆಯ್ಕೆ

Update: 2021-08-01 22:51 IST

ಬಿ.ಸಿ.ರೋಡ್ : ಇಲ್ಲಿಗೆ ಸಮೀಪದ ಮಿತ್ತಬೈಲ್ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾಗಿ ಮುಹಮ್ಮದ್ ಹನೀಫ್ ಹಾಜಿ ಆಯ್ಕೆಯಾಗಿದ್ದಾರೆ.

ಮಿತ್ತಬೈಲ್ ಮುಹ್ಯುದ್ದೀನ್ ಮದ್ರಸ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ  ಅಧ್ಯಕ್ಷ ಕೆ. ಎಂ. ಇಬ್ರಾಹಿಂ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಮುದರ್ರಿಬ್ ಹಾಜಿ ರಿಯಾಝ್ ರಹ್ಮಾನಿ ಕಿನ್ಯ, ಮಿತ್ತಬೈಲ್ ಮುಹ್ಯುದ್ದೀನ್ ಮದ್ರಸ ಸದರ್ ಅಧ್ಯಾಪಕರಾದ ಸಿದ್ದೀಕ್ ದಾರಿಮಿ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಮುಸ್ತಾಫ ಫೈಝಿ 2020-21 ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. 2021-22ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆರಿಸಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ಹನೀಫ್ ಹಾಜಿ ನಂದರಬೆಟ್ಟು, ಉಪಾಧ್ಯಕ್ಷರಾಗಿ ಅಬೂಬಕರ್ ಸಿದ್ದೀಖ್ ದಾರಿಮಿ ಮಿತ್ತಬೈ ಲ್ ಹಾಗೂ ಫಕ್ರುದ್ದಿನ್ ದಾರಿಮಿ ಪಲ್ಲಮಜಲ್, ಪ್ರಧಾನ ಕಾರ್ಯದರ್ಶಿಯಾಗಿ ಪಿ. ಮುಸ್ತಫಾ ಫೈಝಿ ಪರ್ಲಡ್ಕ, ಜೊತೆ ಕಾರ್ಯದರ್ಶಿಗಳಾಗಿ ಅಬೂ ಉವೈಸಿ ಮುಸ್ಲಿಯಾರ್ ಕಡಬ ಹಾಗೂ ಇಲ್ಯಾಸ್ ಅರ್ಶದಿ ಕಳಾಯಿ, ಕೊಶಾಧಿಕಾರಿಯಾಗಿ ಯೂಸುಫ್ ಬದ್ರಿಯಾ ಕೊಳತ್ತಮಜಲ್, ಪರೀಕ್ಷಾ  ಬೋರ್ಡ್ ಚೇರ್ಮ್ಯಾನ್ ಆಗಿ ಹಾಜಿ ಅಬ್ದುಲ್ ಮಜೀದ್  ಮದನಿ ಕಲ್ಲಡ್ಕ, ವೈಸ್ ಚೇರ್ ಮ್ಯಾನ್  ಅಬ್ದುಲ್ ಖಾದಿರ್ ಮದನಿ ಗೂಡಿನಬಳಿ ಹಾಗೂ ಇಸ್ಮಾಯಿಲ್ ಮುಸ್ಲಿಯಾರ್ ಪರ್ಲ್ಯ, ಐ.ಟಿ.ಕೋಡಿನೇಟರ್ ಆಗಿ ಸೈಫುದ್ದೀ ನ್ ಕೌಶರಿ ಫರಂಗಿಪೇಟೆ,  ಎಸ್ಕೆಎಸ್ಬಿವಿ ಚೇರ್ಮೆನ್ ಅಬ್ದುಲ್ ಮಜೀದ್ ಫೈಝಿ, ಮುಡಯ್ ಕೋಡಿ, ವೈಸ್ ಚೇರ್ಮ್ಯಾನ್ ಆಗಿ ರಫೀಕ್ ಮುಸ್ಲಿಯಾರ್ ನೆಹರುನಗರ, ಕನ್ವೀನರಾಗಿ ಬಶೀರ್ ಅಝ್ಹರಿ ಗೂಡಿನಬಳಿ, ಸಹ ಕನ್ವೀನರಾಗಿ ನಿಯಾಝ್ ಫೈಝಿ ಆಮೆಮಾರ್ ಮೊದಲಾದವರು ಆಯ್ಕೆಯಾದರು.

ಇದೇ ವೇಳೆ ಇತ್ತೀಚೆಗೆ ನಿಧನರಾದ ಸಮಸ್ತ ಸಕ್ರಿಯ ಕಾರ್ಯಕರ್ತ, ನಂದರಬೆಟ್ಟು ಅನ್ಸಾರಿಯಾ ಇಸ್ಲಾಮಿಕ್ ಮದ್ರಸದ ಸದರ್ ಅಧ್ಯಾಪಕರೂ ಆಗಿದ್ದ ಮರ್ಹೂಮ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಕಡಬ ಅವರಿಗಾಗಿ ಪ್ರಾರ್ಥಿಸಲಾಯಿತು. ಮುಸ್ತಫ ಫೈಝಿ ಸ್ವಾಗತಿಸಿ, ಅಬೂಬಕರ್ ಸಿದ್ದೀಖ್  ದಾರಿಮಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News