×
Ad

ಬೆಂಗಳೂರು: ಅರ್ಚಕನ ಮನೆಗೆ ನುಗ್ಗಿ ದಾಂಧಲೆ; ಆರೋಪ

Update: 2021-08-01 23:19 IST

ಬೆಂಗಳೂರು, ಆ.1: ಇಲ್ಲಿನ ಬನಶಂಕರಿ ದೇವಾಲಯದ ಪ್ರಧಾನ ಅರ್ಚಕರ ಮನೆಗೆ ನುಗ್ಗಿ ದೇವಸ್ಥಾನದ ವಸ್ತುಗಳನ್ನು ಕಳವು ಮಾಡಿ, ದಾಂಧಲೆ ನಡೆಸಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ವೆಂಕಟೇಶ್ ಮೂರ್ತಿ ಎಂಬಾತ ಪ್ರಧಾನ ಅರ್ಚಕ ಸತ್ಯನಾರಾಯಣ ಶಾಸ್ತ್ರಿ ಅವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ದೇವರ ತಾಳಿ ಹಾಗೂ ಸೀರೆಗಳನ್ನು ದೇವಸ್ಥಾನದಿಂದ ಕಳವು ಮಾಡಿದ್ದಾರೆ ಎಂದು ಆರೋಪಿ ಅರ್ಚಕ ಸತ್ಯನಾರಾಯಣ ಶಾಸ್ತ್ರಿ ನೀಡಿರುವ ದೂರಿನನ್ವಯ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News