ಒಲಿಂಪಿಕ್ಸ್: ನೀರಸ ಪ್ರದರ್ಶನದೊಂದಿಗೆ ಭಾರತದ ಶೂಟಿಂಗ್ ಅಭಿಯಾನ ಅಂತ್ಯ
Update: 2021-08-02 11:24 IST
ಟೋಕಿಯೊ: ಐಶ್ವರಿ ಪ್ರತಾಪ್ ಸಿಂಗ್ ತೋಮರ್(21ನೇ ಸ್ಥಾನ) ಹಾಗೂ ಸಂಜೀವ್ ರಾಜ್ ಪೂತ್(32ನೇ ನಿಮಿಷ)ಪುರುಷರ 50 ಮೀ. 3 ಪೊಸಿಶನ್ಸ್ ಫೈನಲ್ ಗೆ ತೇರ್ಗಡೆಯಾಗಲು ವಿಫಲವಾಗುವುದರೊಂದಿಗೆ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಭಿಯಾನ ಸೋಮವಾರ ನೀರಸವಾಗಿ ಕೊನೆಗೊಂಡಿದೆ.
ಒಲಿಂಪಿಕ್ಸ್ ನಲ್ಲಿ ಭಾಗವಹಿಸಿರುವ ಒಟ್ಟು 15 ಶೂಟರ್ ಗಳ ಪೈಕಿ 10 ಮೀ. ಪಿಸ್ತೂಲ್ ಶೂಟರ್ ಸೌರಭ್ ಚೌಧರಿ ಮಾತ್ರ ಫೈನಲ್ ಸುತ್ತಿಗೆ ತಲುಪಿದ್ದರು. ಆದರೆ ಅವರು ಫೈನಲ್ ಸುತ್ತಿನಲ್ಲಿ 7ನೇ ಸ್ಥಾನ ಪಡೆದು ಪದಕದ ಸುತ್ತಿಗೇರಲು ವಿಫಲರಾಗಿದ್ದರು.