ಪರಿಸರದ ಕುರಿತ ಕಾಳಜಿಯಿಂದ ಬಟ್ಟೆ ಕೈಚೀಲವನ್ನೇ ಬಳಸಿ

Update: 2021-08-02 12:44 GMT

ಉಡುಪಿ, ಆ.2: ದಿನನಿತ್ಯದ ಬಳಕೆಯಲ್ಲಿ ಪ್ಲಾಸ್ಟಿಕ್ ಕೈಚೀಲದ ಬದಲು ಬಟ್ಟೆ ಕೈಚೀಲವನ್ನೇ ಬಳಸುವುದರಿಂದ ಪರಿಸರ ರಕ್ಷಣೆಗೆ ನಮ್ಮ ಪಾಲಿನ ಕೊಡುಗೆಯನ್ನು ನೀಡಬಹುದು ಎಂದು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಎನ್ನೆಸ್ಸೆಸ್ ಘಟಕ, ಗಾಂಧೀ ಅಧ್ಯಯನ ಕೇಂದ್ರ, ಭಾರತೀಯ ವಿಕಾಸ ಟ್ರಸ್ಟ್‌ಗಳು ಕಾಲೇಜಿನ ವಿದ್ಯಾರ್ಥಿ ಗಳಿಗಾಗಿ ಸಂಯುಕ್ತವಾಗಿ ಹಮ್ಮಿಕೊಂಡ ಬಟ್ಟೆ ಕೈಚೀಲ ಹೊಲಿಗೆ, ಪೇಪರ್ ಕವರ್ ತಯಾರಿ ತರಬೇತಿ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು.

ಉಡುಪಿ ಎಂಜಿಎಂ ಕಾಲೇಜಿನ ಎನ್ನೆಸ್ಸೆಸ್ ಘಟಕ, ಗಾಂಧೀ ಅ್ಯಯನಕೇಂದ್ರ,ಾರತೀಯ ವಿಕಾಸ ಟ್ರಸ್ಟ್‌ಗಳು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಸಂಯುಕ್ತವಾಗಿ ಹಮ್ಮಿಕೊಂಡ ಬಟ್ಟೆ ಕೈಚೀಲ ಹೊಲಿಗೆ, ಪೇಪರ್ ಕವರ್ ತಯಾರಿ ತರಬೇತಿ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು. ಎಂಜಿಎಂ. ಕಾಲೇಜಿನ ಯುವ ವಿದ್ಯಾರ್ಥಿಗಳು ಪರಿಸರ ಪ್ರಜ್ಞೆಯನ್ನು ಮೆರೆದು ಬಟ್ಟೆ ಕೈ ಚೀಲ ಹೊಲಿಯುವ ಕೌಶಲ್ಯ ಕಲಿತುಕೊಳ್ಳಲು ಆಸಕ್ತಿ ವಹಿಸಿರುವುದು ಅತ್ಯಂತ ಸ್ವಾಗತಾರ್ಹ ಎಂದವರು ಪ್ರಶಂಸಿಸಿದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ್ ನಾಯ್ಕ ಮಾತನಾಡಿ ವಿದ್ಯಾರ್ಥಿಗಳ ಪರಿಸರ ಆಸಕ್ತಿಯನ್ನು ಶ್ಲಾಸಿದರು. ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಲತಾ ನಾಯಕ್, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಗಳಾದ ಸುಚಿತ್ ಕೋಟ್ಯಾನ್, ರೇಖಾ ಚಂದ್ರ, ಗಾಂಧೀ ಅಧ್ಯಯನ ಕೇಂದ್ರದ ವಿನೀತ್ ರಾವ್ ತರಬೇತಿಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ 20ಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿ ಬಟ್ಟೆ ಚೀಲ ಹೊಲಿಯುವ ಕೌಶಲ್ಯ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News