ಆ.3ರಂದು ದಸಂಸದಿಂದ ಪ್ರತಿಭಟನೆ
Update: 2021-08-02 19:47 IST
ಉಡುಪಿ, ಆ.2: ರಾಜ್ಯದ ಎಲ್ಲ ಬಡವರ, ರೈತರ, ದಲಿತರ, ಅಲ್ಪಸಂಖ್ಯಾತರ ಹಾಗೂ ಗ್ರಾಮೀಣ ಭಾಗದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಅವರ 8ನೇ ಮತ್ತು 9ನೇ ತರಗತಿಯ ಅಂಕದ ಆಧಾರದ ಮೇಲೆ ಹೆಚ್ಚುವರಿಯಾಗಿ ಕೃಪಾಂಕವನ್ನು ಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಶಾಖೆ ನೇತೃತ್ವದಲ್ಲಿ ಆ.3ರಂದು ಸಂಜೆ 5ಗಂಟೆಗೆ ಉಡುಪಿ ತಾಲೂಕು ಕಚೇರಿ ಎದುರು ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.