ಎಸಿಬಿ ಎಸ್ಪಿಯಾಗಿ ಸೈಮನ್ ಅಧಿಕಾರ ಸ್ವೀಕಾರ

Update: 2021-08-02 16:15 GMT

ಮಂಗಳೂರು, ಆ.2: ಭ್ರಷ್ಟಾಚಾರ ನಿಗ್ರಹ ದಳದ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೈಮನ್ ಸಿ.ಎ. ನಿಯುಕ್ತಿಗೊಂಡಿದ್ದು, ಸೋಮವಾರ ನಗರದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಡಬದವರಾದ ಇವರು, 2001ರಲ್ಲಿ ರಾಜ್ಯ ಸಿಐಡಿ ವಿಭಾಗದ ಸಬ್‌ಇನ್‌ಸ್ಪೆಕ್ಟರ್‌ಆಗಿ ಪೊಲೀಸ್ ಸೇವೆ ಆರಂಭಿಸಿದರು. ಬಳಿಕ ಪದೋನ್ನತಿಗೊಂಡು ಇನ್‌ಸ್ಪೆಕ್ಟರ್ ಆದರು. 2011ರಲ್ಲಿ ಮುಖ್ಯಮಂತ್ರಿಯ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

2020ರಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪದೋನ್ನತಿಗೊಂಡ ಇವರು, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರ ವಹಿಸಿಕೊಂಡಿದ್ದಾರೆ. ಸೈಮನ್ ಅವರು ಉಪ್ಪಿನಂಗಡಿಯಲ್ಲಿ ವ್ಯಾಸಂಗ ಆರಂಭಿಸಿ, ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪೂರೈಸಿ, ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, ವಕೀಲ ವೃತ್ತಿ ಆರಂಭಿಸಿದ್ದರು. ಇವರ ತಂದೆ ಸಿಸಿ ಅಬ್ರಹಾಂ ಕೂಡ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಬ್‌ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News