ಕೋಳಿಅಂಕ: ನಾಲ್ವರು ವಶಕ್ಕೆ

Update: 2021-08-02 16:22 GMT

ಮಂಗಳೂರು: ಪದವು ಗ್ರಾಮದ ಮುಗ್ರೋಡಿ ಕಟ್ಟೆಪುಣಿ ಎಂಬಲ್ಲಿರುವ ಮೈದಾನದಲ್ಲಿ ಕೋಳಿ ಅಂಕಕ್ಕೆ ಹಣವನ್ನು ಪಣವಾಗಿಟ್ಟು ಬಾಜಿ ಆಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಿವಪ್ರಸಾದ್, ದೀಪಕ್, ಕೃಷ್ಣಪ್ಪ, ವಿಶ್ವನಾಥ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.

ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಖಚಿತ ವರ್ತಮಾನ ಮೇರೆಗೆ ನಾಲ್ವರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ ಆರು ಅಂಕದ ಕೋಳಿ ಹಾಗೂ 1,280 ರೂ. ಹಣ ಮತ್ತು ಕಪ್ಪು ಬಣ್ಣದ ದ್ವಿಚಕ್ರ ವಾಹನವನ್ನು ಮಹಜರು ವಶಪಡಿಸಿಕೊಳ್ಳಲಾಗಿದೆ.

ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News