ಕೊಪ್ಪ; ಪಡಿತರ ಚೀಟಿದಾರರು ಕಡ್ಡಾಯವಾಗಿ e-Kyc ಮಾಡಿಸಿ : ತಹಶೀಲ್ದಾರ್‌

Update: 2021-08-02 17:15 GMT

ಕೊಪ್ಪ: ತಾಲೂಕು ವ್ಯಾಪ್ತಿಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರು ಕಡ್ಡಾಯವಾಗಿ e-Kyc ಮಾಡಿಸುವಂತೆ ತಹಶೀಲ್ದಾರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದ ನಿರ್ದೇಶನದಂತೆ ರಾಜ್ಯ ವ್ಯಾಪಿ ಪಡಿತರ ಚೀಟಿದಾರರ ಕುಟುಂಬ ಸದಸ್ಯರ ಬೆರಳಚ್ಚು ದೃಢೀಕರಣ ಮಾಡಿಸುವ ಬಗ್ಗೆ ಆ.1ರಿಂದ ಆ.10ರವರೆಗೆ e-Kyc ಮಾಡಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಅದರಂತೆ ಕೊಪ್ಪ ತಾಲ್ಲೂಕು ವ್ಯಾಪ್ತಿಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಆ.1ರಿಂದ ಆ.10ರವರೆಗೆ e-Kyc ಮಾಡಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಅಯಾ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಈವರೆಗೆ ಬಯೋ ನೀಡದಿರುವ ಪಡಿತರ ಚೀಟಿದಾರರು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗೆ ಹೋಗಿ ತಮ್ಮ ಬೆರಳಚ್ಚು ನೀಡಿ e-Kyc ಮಾಡಿಸಿಕೊಳ್ಳಲು ತಿಳಿಸಿದೆ. ಬೆರಳಚ್ಚು ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಡಿತರ ಚೀಟಿಯಲ್ಲಿ ಹೆಸರುಗಳು ರದ್ದಾಗುವ ಹಾಗೂ ಪಡಿತರ ತಡೆ ಹಿಡಿಯುವ ಸಂಭವವಿರುವುದರಿಂದ ಕಡ್ಡಾಯವಾಗಿ ಬೆರಳಚ್ಚು ನೀಡಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News