ಕೇರಳ, ಮಹಾರಾಷ್ಟ್ರದಿಂದ ಮಂಗಳೂರು ರೈಲು ನಿಲ್ದಾಣಕ್ಕೆ ಬಂದಿಳಿದ 51 ಮಂದಿ ಕ್ವಾರಂಟೈನ್: ಡಿಸಿಪಿ

Update: 2021-08-02 17:30 GMT

ಮಂಗಳೂರು: ಕೇರಳ ಹಾಗೂ ಮಹಾರಾಷ್ಟ್ರದಿಂದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೆ ಮಂಗಳೂರು ರೈಲು ನಿಲ್ದಾಣಕ್ಕೆ ಆಗಮಿಸಿದ 51 ಪ್ರಯಾಣಿಕರನ್ನು ಪುರಭವನದಲ್ಲಿ ತಾತ್ಕಾಲಿಕ ಕ್ವಾರಂಟೈನ್ ಇರಿಸಲಾಗಿದೆ ಎಂದು ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಯಾವುದೇ ಪ್ರಯಾಣಿಕರನ್ನು ವಶಕ್ಕೆ ಪಡೆದಿಲ್ಲ. ಕೇವಲ ತಾತ್ಕಾಲಿಕ ಕ್ವಾರಂಟೈನ್‌ನಲ್ಲಿ ಪ್ರಯಾಣಿಕರನ್ನು ಇರಿಸಲಾಗಿದೆ. ಪ್ರಯಾಣಿಕರಿಗೆ ಗಂಟಲು ದ್ರವ ಪರೀಕ್ಷೆ‌ ನಡೆಸಲಾಗಿದ್ದು, ಸ್ಯಾಂಪಲ್ ಪಡೆಯಲಾಗಿದೆ. ಸ್ಯಾಂಪಲ್‌ಗಳ ಫಲಿತಾಂಶ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.

ಪರೀಕ್ಷೆಯಲ್ಲಿ‌ ನೆಗೆಟಿವ್ ಬಂದಂತಹ ಪ್ರಯಾಣಿಕರನ್ನು ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು.‌ ಪಾಸಿಟಿವ್ ಬಂದ ಪ್ರಯಾಣಿಕರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಕಳುಹಿಸಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.

ಈ ತಪಾಸಣಾ ಕಾರ್ಯಾಚರಣೆಯು ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ನಡೆಯುತ್ತಿದೆ.‌ ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಡಿಸಿಪಿ‌‌‌ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News