​ಎಲ್ಲೈಸಿ ವ್ಯವಸ್ಥಾಪಕ ನಿರ್ದೇಶಕಿಯಾಗಿ ಮಿನಿ ಐಪೆ ಅಧಿಕಾರ ಸ್ವೀಕಾರ

Update: 2021-08-03 10:55 GMT
ಮಿನಿ ಐಪೆ

ಹೊಸದಿಲ್ಲಿ : ಭಾರತೀಯ ಜೀವ ವಿಮಾ ನಿಗಮ (ಎಲ್ಲೈಸಿ)ದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಮಿನಿ ಐಪೆ ಸೋಮವಾರ ಅಧಿಕಾರ ವಹಿಸಿ ಕೊಂಡಿದ್ದಾರೆ. ಅವರು ಜು.5ರಂದು ಭಾರತ ಸರಕಾರದ ಅಧಿಸೂಚನೆಯ ಪ್ರಕಾರ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಕ ಗೊಂಡಿದ್ದರು.

ಮಿನಿ ಐಪೆ ಆಂಧ್ರ ವಿಶ್ವವಿದ್ಯಾನಿಲಯದಿಂದ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ ಮತ್ತು 1986ರಲ್ಲಿ ನೇರ ನೇಮಕಾತಿ ಅಧಿಕಾರಿಯಾಗಿ ಎಲ್ಲೈಸಿಗೆ ಸೇರಿದ್ದರು.

ಅವರು ಎಲ್ಲೈಸಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದಾರೆ. ಎಲ್ಲೈಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಕಾನೂನು ವಿಭಾಗದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿದ್ದರು.

ಭಾರತದ ಎಲ್ಲೈಸಿಯಲ್ಲಿ ಮಿನಿ ಐಪೆ ಮೊದಲ ಮಹಿಳಾ ವಲಯ ವ್ಯವಸ್ಥಾಪಕಿ (ಉಸ್ತುವಾರಿ) ಮತ್ತು ಎಸ್‌ಸಿಝೆಡ್‌ಒ ಹೈದರಾಬಾದ್‌ನ ಮುಖ್ಯಸ್ಥರಾಗಿದ್ದರು. ಅವರು ಎಲ್ಲೈಸಿ ಎಚ್‌ಎಫ್‌ಎಲ್ ಫೈನಾನ್ಸಿಯಲ್ ಸರ್ವೀಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ಅಂತರ್‌ ರಾಷ್ಟ್ರೀಯ ಕಾರ್ಯಾಚರಣೆಗಳು) ಅವರು ಕೆಲಸ ಮಾಡಿದ್ದಾರೆ ಮತ್ತು ಎಲ್ಲೈಸಿ ಎಚ್‌ಎಫ್‌ಎಲ್ ಫೈನಾನ್ಸಿಯಲ್ ಸರ್ವೀಸಸ್ ಲಿಮಿಟೆಡ್‌ನ್ನು ಹೊಸ ಎತ್ತರಕ್ಕೆ ಮತ್ತು ಅವರ ಅಧಿಕಾರಾವಧಿಯಲ್ಲಿ ಲಾಭದಲ್ಲಿ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಶ್ಚಿಮ ವಲಯದ ಪ್ರಾದೇ ಶಿಕ ವ್ಯವಸ್ಥಾಪಕರಾಗಿ (ಪಿ ಆ್ಯಂಡ್ ಐಆರ್) ಮತ್ತು ಪ್ರಾದೇಶಿಕ ವ್ಯವಸ್ಥಾಪಕರಾಗಿ (ಎಸ್ಟೇಟ್) ಕಾರ್ಯನಿರ್ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News