ಭಾರತ-ಚೀನಾ ಜಂಟಿ ಹೇಳಿಕೆ ಬೆನ್ನಲ್ಲೇ ಹೊರಬಿದ್ದ ಗಲ್ವಾನ್ ಘರ್ಷಣೆಯ ವೀಡಿಯೋಗಳು

Update: 2021-08-03 12:17 GMT

ಹೊಸದಿಲ್ಲಿ:  ಭಾರತ ಮತ್ತು ಚೀನೀ ಸೈನಿಕರ ನಡುವೆ ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ಕಳೆದ ವರ್ಷದ ಜೂನ್ 15ರಂದು ನಡೆದ  ಘರ್ಷಣೆಯ ವೀಡಿಯೋಗಳನ್ನು ಚೀನಾ ಬಿಡುಗಡೆಗೊಳಿಸಿದೆ. ಪೂರ್ವ ಲಡಾಖ್‍ನಲ್ಲಿ ಉದ್ವಿಗ್ನತೆಯನ್ನು ಶಮನಗೊಳಿಸುವ ಯತ್ನವಾಗಿ ಕಮಾಂಡರ್ ಮಟ್ಟದ ಮಿಲಿಟರಿ ಮಾತುಕತೆಗಳು ಮುಂದುವರಿಯಲಿವೆ ಎಂದು ಎರಡೂ ದೇಶಗಳು ಸೋಮವಾರ ಜಂಟಿ ಹೇಳಿಕೆ ಬಿಡುಗಡೆಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ವೀಡಿಯೋ ಹೊರಬಿದ್ದಿದೆ.

ವೀಡಿಯೋದಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರತ್ತ ಗಲ್ವಾನ್ ನದಿ ಸಮೀಪ ಎತ್ತರದ ಪ್ರದೇಶದಿಂದ ಕಲ್ಲುಗಳನ್ನೆಸೆಯುತ್ತಿರುವುದು ಹಾಗೂ ಎರಡೂ ಕಡೆಗಳಲ್ಲಿ ಸೈನಿಕರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿರುವುದು ಕಾಣಿಸುತ್ತದೆ.

ಈ ಘರ್ಷಣೆಯಲ್ಲಿ ತನ್ನ 20 ಸೈನಿಕರು ಹತರಾಗಿದ್ದಾರೆ ಎಂದು ಭಾರತ ಈಗಾಗಲೇ ಅಧಿಕೃತವಾಗಿ ಘೋಷಿಸಿದೆ.

ಕಳೆದ ಶನಿವಾರ ಭಾರತ ಮತ್ತು ಚೀನಾ 12ನೇ  ಸುತ್ತಿನ ಮಿಲಿಟರಿ ಮಾತುಕತೆಗಳನ್ನು ನಡೆಸಿವೆ ಹಾಗೂ ಎಲ್ಲಾ ವಿವಾದಗಳನ್ನು ಇತ್ಯರ್ಥಪಡಿಸಲು ನಿರ್ಣಯಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News