​ಸಿಬಿಎಸ್‌ಸಿ ಫಲಿತಾಂಶ: ಲಿಟ್ಲ್‌ರಾಕ್ ಶಾಲೆ ಗಮನಾರ್ಹ ಸಾಧನೆ

Update: 2021-08-03 12:31 GMT
ದೃಶ್ಯ ಭರತ್ ಶೆಟ್ಟಿ / ಮಧುರಾ ವಿ.ರಾವ್ / ರೈಮಾ ಮಹತೊ

ಬ್ರಹ್ಮಾವರ, ಆ.3: ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಈ ಬಾರಿಯೂ ತನ್ನ 10ನೇ ಮತ್ತು ಹನ್ನೆರಡನೇ ತರಗತಿಗಳ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಶೇ.100 ತೇರ್ಗಡೆ ಫಲಿತಾಂಶವನ್ನು ದಾಖಲಿಸಿದೆ.

ಹತ್ತನೇ ತರಗತಿ ಪರೀಕ್ಷೆಗೆ ಹಾಜರಾದ 257 ವಿದ್ಯಾರ್ಥಿಗಳಲ್ಲಿ 106 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದು, 88 ವಿದ್ಯಾರ್ಥಿ ಗಳು ಶೇ.80-89, 48 ವಿದ್ಯಾರ್ಥಿಗಳು ಶೇ.70-79, 14 ವಿದ್ಯಾರ್ಥಿಗಳು ಶೇ.60-69 ಹಾಗೂ ಓರ್ವ ವಿದ್ಯಾರ್ಥಿ ಶೇ.55-59ಅಂಕಗಳನ್ನು ಪಡೆದಿದ್ದಾರೆ.

ಹತ್ತನೇ ತರಗತಿಯಲ್ಲಿ ದೃಶ್ಯ ಭರತ್ ಶೆಟ್ಟಿ ಅತೀ ಹೆಚ್ಚು ಅಂದರೆ ಶೇ. 99.4 ಅಂಕಗಳನ್ನು ಗಳಿಸಿದ್ದಾರೆ.

ಹನ್ನೆರಡನೆಯ ತರಗತಿ ಪರೀಕ್ಷೆಗೆ ಹಾಜರಾದ 93 ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದು, 32 ವಿದ್ಯಾರ್ಥಿಗಳು ಶೇ.80-89, ಐವರು ವಿದ್ಯಾರ್ಥಿಗಳು ಶೇ.70-79 ಹಾಗೂ ಓರ್ವ ವಿದ್ಯಾರ್ಥಿ ಶೇ.60-69 ಅಂಕಗಳನ್ನು ಪಡೆದಿದ್ದಾರೆ.
ಹನ್ನೆರಡನೆಯ ತರಗತಿ ಪರೀಕ್ಷೆಗೆ ಹಾಜರಾದ 93 ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದು, 32 ವಿದ್ಯಾರ್ಥಿ ಗಳು ಶೇ.80-89, ಐವರು ವಿದ್ಯಾರ್ಥಿಗಳು ಶೇ.70-79 ಹಾಗೂ ಓರ್ವ ವಿದ್ಯಾರ್ಥಿ ಶೇ.60-69 ಅಂಕಗಳನ್ನು ಪಡೆದಿದ್ದಾರೆ.

ಜೀವಶಾಸ್ತ್ರ ಸಂಯೋಜನೆಯಲ್ಲಿ ಮಧುರಾ ವಿ.ರಾವ್ ಶೇ.98.2, ಕಂಪ್ಯೂಟರ್ ವಿಭಾಗದಲ್ಲಿ ರೈಮಾ ಮಹತೊ ಶೇ.99.6 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದಾರೆ.

ಜೀವಶಾಸ್ತ್ರ ಸಂಯೋಜನೆಯಲ್ಲಿ ಮುರಾವಿ.ರಾವ್‌ಶೇ.98.2,ಕಂಪ್ಯೂಟರ್‌ವಿಾಗದಲ್ಲಿ ರೈಮಾ ಮಹತೊ ಶೇ.99.6 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದಾರೆ. ಲಿಟ್ಲ್‌ರಾಕ್ ಸ್ಕೂಲ್‌ನ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಈ ಮಹತ್ಸಾಧನೆಗಾಗಿ ಅವರನ್ನು ಅಭಿನಂದಿಸಿದೆ. ನಮ್ಮ ವಿದ್ಯಾರ್ಥಿಗಳ ಗಮನಾರ್ಹ ಸಾಧನೆಯಿಂದ ಬಹಳ ಸಂತೋಷವಾಗಿದೆ. ಕಠಿಣ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ಸಿಗದೆ ಇರುವುದಿಲ್ಲ ಎನ್ನುವುದು ಇನ್ನೊಮ್ಮೆ ಸಾಬೀತಾಗಿದೆ ಎಂದು ಶಾಲಾ ಪ್ರಾಂಶುಪಾಲ ಡಾ.ಜಾನ್ ಥೋಮಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News