ಮಂಗಳೂರು: ವಿನ್ಯಾಸ್ ಟೈಲರಿಂಗ್ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ
ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ವಿನ್ಯಾಸ್ ಟೈಲರಿಂಗ್ 17ನೇ ಶಾಖೆಯ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣಾ ಸಮಾರಂಭವು ಹಸನಬ್ಬ ಮಾಸ್ಟರ್ ಪದವಿ ಪೂರ್ವ ಕಾಲೇಜು, ಕಾಟಿಪಳ್ಳದಲ್ಲಿ ಜರುಗಿತು.
ಸಮಾರಂಭವನ್ನು ಸಂಶಾದ್ ಅಬೂಬಕ್ಕರ್ (ಎಮ್.ಸಿ.ಸಿ, 5ನೇ ವಾರ್ಡ್ ಕಾರ್ಪರೇಟರ್, ಚೊಕ್ಕಬೆಟ್ಟು) ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರೇಖಾ ಬಿ (ಪ್ರಾಂಶುಪಾಲರು, ಹಸನಬ್ಬ ಮಾಸ್ಟರ್ ಪದವಿ ಪೂರ್ವ ಕಾಲೇಜು, ಕಾಟಿಪಳ್ಳ) ಆಬಿದ ಶರೀಫ್ (ಉಪಾಧ್ಯಕ್ಷರು, ಪಿ.ಟಿ.ಎ ನೂರುಲ್ ಹುದಾ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕಾಟಿಪಳ್ಳ) ರೇಶ್ಮಾ ಡಿಸೋಜ (ಅಧ್ಯಕ್ಷರು, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್, ಕಾಟಿಪಳ್ಳ) ಹಾಗೂ ಮುಮ್ತಾಝ್ ಪಕ್ಕಲಡ್ಕ, ಆತಿಕಾ ರಫೀಕ್, ಝೊಹರಾ ಉಳ್ಳಾಲ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸರೆ ವುಮೆನ್ಸ್ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷೆ ಶಬೀನಾ ಅಕ್ತರ್ ವಹಿಸಿದ್ದರು. ಟೈಲರಿಂಗ್ ಶಿಕ್ಷಕಿ ಕೌಸರ್ ಅಬ್ದುಲ್ ರೆಹೆಮಾನ್ ರವರನ್ನು ಮುಖ್ಯ ಅತಿಥಿಗಳು ಸನ್ಮಾನಿಸಿದರು. ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿನಿ ರುಕ್ಷಾನ ಸ್ವಾಗತಿಸಿದರು. ವಿದ್ಯಾರ್ಥಿನಿ ತಸ್ಕೀನ ಧನ್ಯವಾದಗೈದರು. ವಿದ್ಯಾರ್ಥಿನಿ ನೀಶಾನ ಕಾರ್ಯಕ್ರಮ ನಿರೂಪಣೆಯನ್ನು ಗೈದರು.