×
Ad

ಕೂಳೂರು: ಲಾರಿ ಢಿಕ್ಕಿ; ಕಾರು ಜಖಂ

Update: 2021-08-03 22:05 IST

ಮಂಗಳೂರು, ಆ.3: ಪಣಂಬೂರು ಕಡೆಯಿಂದ ಮಂಗಳೂರು ನಗರದತ್ತ ಬರುತ್ತಿದ್ದ ಕಾರೊಂದು ಮಂಗಳವಾರ ಮಧ್ಯಾಹ್ನ ಕೂಳೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಲಾರಿ ಢಿಕ್ಕಿಯಾಗಿದ್ದು, ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಕಾರಿನಲ್ಲಿ ಚಾಲಕ ಹಾಗೂ ಇನ್ನೋರ್ವ ವ್ಯಕ್ತಿಯಿದ್ದರು ಎಂದು ತಿಳಿದುಬಂದಿದೆ. ಕೂಳೂರು ರಿಲಾಯನ್ಸ್ ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆ ನೇರವಾಗಿ ಸಾಗುತ್ತಿದ್ದ ಕಾರನ್ನು ಚಾಲಕ ಬಲಕ್ಕೆ ತಿರುಗಿಸಿದ್ದು, ಈ ವೇಳೆ ಕಾರು ಡಿವೈಡರ್ ಮೇಲೇರಿ ಮುಂದಿನ ಚಕ್ರ ಇನ್ನೊಂದು ಭಾಗದಲ್ಲಿ ಕೆಳಕ್ಕೆ ಇಳಿದಿದೆ. ಇದರಿಂದ ಕಾರು ಡಿವೈಡರ್‌ನಲ್ಲಿ ಸಿಕ್ಕಿಹಾಕಿದ್ದು, ಈ ವೇಳೆ ಹಿಂದಿನಿಂದ ಬರುತ್ತಿದ್ದ ಲಾರಿ ಢಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News