ಪಿ.ವಿ. ಸಿಂಧು, ಪ್ರಧಾನಿ ಮೋದಿಗೆ ಮಂಗಳೂರು ಪಬ್ಬಾಸ್‌ನಿಂದ ಐಸ್ ಕ್ರೀಂ ಆಫರ್

Update: 2021-08-03 16:41 GMT
Photo: Twitter/@PabbasIdealCafe

ಮಂಗಳೂರು: ನಗರದ ಪ್ರಸಿದ್ಧ ಪಬ್ಬಾಸ್ ಐಡಿಯಲ್ ಕೆಫೆಯು ಟೋಕಿಯೋ ಒಲಿಂಪಿಕ್‌ನಲ್ಲಿ ನಡೆದ ಬ್ಯಾಡ್ಮಿಂಟನ್ ಆಟದಲ್ಲಿ ಕಂಚಿನ ಪದಕ ಜಯಿಸಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರೊಂದಿಗೆ ಕುಳಿತು ಪ್ರಧಾನಿ ಮೋದಿ ಐಸ್ ಕ್ರೀಂ ಸವಿಯಲಿದ್ದಾರೆ. ಈ ಐಸ್ ಕ್ರೀಂನ್ನು ಟ್ರೀಟ್ ಕೊಡುವುದಾಗಿ ಟ್ವೀಟ್ ಮಾಡಿ ಪಬ್ಬಾಸ್ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದೆ.

ಐಡಿಯಲ್ ಕೆಫೆ ಆಫರ್: ಪ್ರಧಾನಿ ನರೇಂದ್ರ ಮೋದಿಯು ಪಿ.ವಿ. ಸಿಂಧು ಅವರಿಗೆ ಒಲಿಂಪಿಕ್‌ನಲ್ಲಿ ಬ್ಯಾಡ್ಮಿಂಟನ್ ಆಟದಲ್ಲಿ ಪದಕ ಗೆದ್ದು ಬಂದಲ್ಲಿ ಜೊತೆಯಾಗಿ ಐಸ್ ಕ್ರೀಂ ಸವಿಯೋಣ ಎಂದು ಆಫರ್ ನೀಡಿದ್ದರು. ಇದೀಗ ಪಿ.ವಿ. ಸಿಂಧು ಕಂಚಿನ ಪದಕ ಗೆದ್ದು ಬಂದಿದ್ದಾರೆ. ಹೀಗಾಗಿ ಮೋದಿ ಮತ್ತೆ ಟ್ವೀಟ್ ಮಾಡಿ ಐಸ್ ಕ್ರೀಂ ಸವಿಯುವ ವಿಚಾರವನ್ನು ನೆನಪಿಸಿದ್ದಾರೆ. ಪ್ರಧಾನಿ ಟ್ವೀಟ್ ಬೆನ್ನಲ್ಲೇ ಈ ಐಸ್ ಕ್ರೀಂನ್ನು ತಾವು ಒದಗಿಸುತ್ತೇವೆ ಎಂದು ಮಂಗಳೂರಿನ ಪ್ರಸಿದ್ಧ ಐಸ್ ಕ್ರೀಂ ಪಾರ್ಲರ್ ಪಬ್ಬಾಸ್ ಐಡಿಯಲ್ ಕೆಫೆ ಟ್ವೀಟ್ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೆಫೆಯು "ಆತ್ಮೀಯ ಮೋದಿಯವರೇ, ತಾವು ಪಿ.ವಿ.ಸಿಂಧು ಅವರಿಗೆ ಭರವಸೆ ನೀಡಿದ್ದೀರಿ. ಈಗ ಅವರು ಪದಕ ಗೆದ್ದು ಬಂದಿದ್ದಾರೆ. ಭಾರತದ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ್ತಿಯೊಂದಿಗೆ ನಿಮಗೂ ಅತ್ಯುತ್ತಮ ಐಸ್ ಕ್ರೀಂ ನೀಡಿ ಸಂಭ್ರಮಿಸಲು ಉತ್ಸುಕರಾಗಿದ್ದೇವೆ" ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News