ಸಿಬಿಎಸ್‍ಇ ಫಲಿತಾಂಶ: ಪ್ರೆಸ್ಟೀಜ್ ಶಾಲೆ ಗಮನಾರ್ಹ ಸಾಧನೆ

Update: 2021-08-03 17:29 GMT
ಖದೀಜಾ ಹಾನಿಯಾ / ಲಿಬಾ ಮೆಹ್ವಿಶ್ / ಡಿಂಪಲ್ /  ಜಾನವಿ 

ಮಂಗಳೂರು: 2020-2021ನೇ ಸಾಲಿನ ಸಿಬಿಎಸ್‍ಇ ಹತ್ತನೇ ತರಗತಿಯ ಫಲಿತಾಂಶ ಬಂದಿದ್ದು, ಪ್ರೆಸ್ಟೀಜ್ ಶಾಲೆಗೆ ಸತತ ಏಳನೇ ಬಾರಿಗೆ 100% ಫಲಿತಾಂಶ ಬಂದಿದೆ. ಹೆಚ್ಚಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಖದೀಜಾ ಹಾನಿಯಾ(ಶೇ.96), ಲಿಬಾ ಮೆಹ್ವಿಶ್(ಶೇ.95) ,ಡಿಂಪಲ್ (ಶೇ.94.6) ಹಾಗೂ ಜಾನವಿ (ಶೇ.94.4) ಇವರುಗಳು ಶಾಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

2020-2021 ರ ಎ.ಐ.ಎಸ್.ಎಸ್.ಸಿ ಪರೀಕ್ಷೆ ಬರೆದ 79 ವಿದ್ಯಾರ್ಥಿಗಳ ಪೈಕಿ 42 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಶುಭಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News