ಬ್ಯಾರಿ ಜನಾಂಗ ಮತ್ತು ಕೋವಿಡೋತ್ತರ ಶಿಕ್ಷಣ ಕುರಿತು ವೆಬಿನಾರ್‌

Update: 2021-08-04 08:21 GMT

ಮಂಗಳೂರು, ಆ.4: ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ‘ಬ್ಯಾರಿ ಜನಾಂಗ ಮತ್ತು ಕೋವಿಡೋತ್ತರ ಶಿಕ್ಷಣ’ ಎಂಬ ವೆಬಿನಾರ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಸೈನ್ಸ್ ನ ಪ್ರಾಂಶುಪಾಲ ಪ್ರೊ.ಇಕ್ಬಾಲ್ ಅಹ್ಮದ್ ಯು.ಟಿ., ಬ್ಯಾರಿ ಜನಾಂಗ ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ. ಕೋವಿಡ್ ಸಂದರ್ಭದಲ್ಲಿ ಹೆತ್ತವರು, ಪೋಷಕರು ವಿದ್ಯಾರ್ಥಿಗಳ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಉಪನ್ಯಾಸ ನೀಡಿದ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ಬ್ಯಾರಿ ಜನಾಂಗದ ಹಿನ್ನಲೆ, ಸ್ಥಿತಿಗತಿಗಳ ಬಗ್ಗೆ ವಿವರಿಸಿದರಲ್ಲದೆ ಕೋವಿಡ್ ಪರಿಸ್ಥಿತಿಯಲ್ಲಿ ಶಿಕ್ಷಣ ಕ್ಷೇತ್ರ ಹಾಗೂ ಬ್ಯಾರಿ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಕೋವಿಡ್ ಪರಿಸ್ಥಿತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದೆ ಸಾಗುತ್ತಿದ್ದೇವೆ ಎಂದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಹೈದರಲಿ ಕೋವಿಡ್ ಪರಿಸ್ಥಿಯಲ್ಲಿ ಬ್ಯಾರಿ ಜನಾಂಗವು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದಿಡಬೇಕಾದ ಮಾರ್ಗೋಪಾಯಗಳ ಬಗ್ಗೆ ಮಾಹಿತಿ ನೀಡಿದರು.

ಬ್ಯಾರಿ ಅಧ್ಯಯನ ಪೀಠದ ಸದಸ್ಯ ಅಹಮದ್ ಬಾವ ಮೊಯ್ದಿನ್ ಪಡೀಲ್ ಮಾತನಾಡಿದರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ.ಎ. ಸಿದ್ದೀಕ್ ಸ್ವಾಗತಿಸಿದರು. ಪೀಠದ ಸ್ವಯಂಸೇವಕಿ ಆಯಿಶಾ ಸಾಬಿದಾ ವಂದಿಸಿದರು. ತಸ್ರೀಫಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News